ಶ್ರೀನಗರ, 02 ಜುಲೈ (ಹಿ.ಸ.) :
ಆ್ಯಂಕರ್ : ಹಿಂದು ಧರ್ಮೀಯರ ಪವಿತ್ರ ಯಾತ್ರೆಯಾದ ಅಮರನಾಥ ಯಾತ್ರೆಗೆ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇಂದು ಚಾಲನೆ ನೀಡಿದರು.
ಜಮ್ಮುವಿನ ಭಗವತಿ ನಗರ ಶಿಬಿರದಿಂದ 5,880 ಯಾತ್ರಿಕರೊಂದಿಗೆ ಧ್ವಜಾರೋಹಣದ ಮೂಲಕ ಯಾತ್ರೆಗೆ ಸಾಂಕೇತಿಕ ಚಾಲನೆ ನೀಡಲಾಯಿತು.
ಜುಲೈ 3ರಿಂದ ಬಾಲ್ಟಾಲ್ ಹಾಗೂ ಪಹಲ್ಗಾಮ್ ಮಾರ್ಗಗಳಿಂದ ಯಾತ್ರೆ ಅಧಿಕೃತವಾಗಿ ಆರಂಭವಾಗಲಿದ್ದು, ಈ ಬಾರಿ ಯಾತ್ರೆ ಆಗಸ್ಟ್ 7ರವರೆಗೆ 38 ದಿನಗಳು ನಡೆಯಲಿದೆ.
ಭದ್ರತಾ ದೃಷ್ಟಿಯಿಂದ ಕಥುವಾದ ಲಖನ್‌ಪುರದಿಂದ ಗುಹೆಯವರೆಗೆ ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa