ಪಾಟ್ನಾ, 02 ಜುಲೈ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಟ್ನಾ ನಗರಕ್ಕೆ ಆಗಮಿಸಿದ್ದಾರೆ.
ಅವರು ಇಂದು ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪಾಟ್ನಾ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಪಡೆದ ಸಿಂಗ್, ನೇರವಾಗಿ ಬಾಪು ಸಭಾಂಗಣಕ್ಕೆ ಆಗಮಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಹೊಸ ರಾಜ್ಯಾಧ್ಯಕ್ಷ ಡಾ. ದಿಲೀಪ್ ಜೈಸ್ವಾಲ್ ವಹಿಸಿದ್ದಾರೆ. ಚುನಾವಣೆ ಪೂರ್ವ ತಂತ್ರದ ಮೇಲೆ ಗಂಭೀರ ಚರ್ಚೆಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.
ಈ ಸಭೆಯು ಡಾ. ಜೈಸ್ವಾಲ್ ಅಧ್ಯಕ್ಷರಾಗಿ ನೇಮಕಗೊಂಡ ನಂತರದ ಮೊದಲ ಮಹತ್ವದ ಸಭೆಯಾಗಿದ್ದು, ಬಿಹಾರ ಬಿಜೆಪಿಗೆ ಸಂಘಟನಾ ದೃಷ್ಟಿಯಿಂದ ಬಹು ಮುಖ್ಯವಾಗಿದೆ.
ಸಭೆಯಲ್ಲಿ ಶಾಸಕರು, ಜಿಲ್ಲಾ ನಾಯಕರು, ಮತ್ತು ಪ್ರಮುಖ ಸಂಘಟನಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa