ಬೆಂಗಳೂರು, 2 ಜುಲೈ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಲಕ್ಕಿ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅವರ ದೂರವಾಣಿ ಸಂಭಾಷಣೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಕುರಿತು, ಬಿ. ಆರ್. ಪಾಟೀಲ್ ಅವರು ವಿಶೇಷವಾಗಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿಯವರ ಬಳಿ ಭೇಟಿ ಮಾಡಿಸಿದ್ದು ನಾನೇ ಎಂದು ನಾನು ಎಲ್ಲೂ ಹೇಳಿಲ್ಲ. ನಾವು ಜತೆಯಾಗಿ ಭೇಟಿಗೆ ಹೋಗಿದ್ದೆವು. ಅವರು ಹೋಗೋದಿಲ್ಲ ಎಂದಾಗ ನಾನು ಮಾತ್ರ ಒತ್ತಾಯದಿಂದ ಮನವೊಲಿಸಿದ್ದೆ,” ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಾಟೀಲ್, “ಅವರು ಒಬ್ಬ ಮಾಸ್ ಲೀಡರ್. ಅವರಷ್ಟು ಜನಾದರಣೆಯ ನಾಯಕನನ್ನ ಇನ್ನೊಬ್ಬರನ್ನು ನೋಡಲು ಸಾಧ್ಯವಿಲ್ಲ,” ಎಂದಿದ್ದಾರೆ.
ಇದು ನನ್ನ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧ ಹಾಳು ಮಾಡಲು ನಡೆಸಿರುವ ಸಂಚು ಎಂದು ಪಾಟೀಲ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa