ವಿಜಯಪುರ, 2 ಜುಲೈ (ಹಿ.ಸ.) :
ಆ್ಯಂಕರ್ : ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಿಟ್ ನಗರದಲ್ಲಿ ಜುಲೈ 4 ರಿಂದ 6 ರವರೆಗೆ ನಡೆಯಲಿರುವ ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿಗಳು ಮಂಗಳವಾರ ಬೆಂಗಳೂರಿನಿಂದ ಅಮೆರಿಕದತ್ತ ಯಾತ್ರೆ ಕೈಗೊಂಡಿದ್ದಾರೆ.
ಈ ಬೃಹತ್ ಸಮ್ಮೇಳನವು ವಿಶ್ವದ ನಾನಾ ಭಾಗಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು, ವಿಶೇಷವಾಗಿ ಲಿಂಗಾಯತ ವೀರಶೈವ ಭಕ್ತರು ಸಂಯುಕ್ತವಾಗಿ ಆಯೋಜಿಸಿರುವ ಪ್ರಭಾವಶಾಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ. ರುದ್ರಮುನಿ ಸ್ವಾಮೀಜಿ ಅವರು ಈ ವೇದಿಕೆಯಲ್ಲಿ ವೀರಶೈವ-ಲಿಂಗಾಯತ ಧರ್ಮದ ಆಧ್ಯಾತ್ಮಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿಗಳು ಮತ್ತು ನೈತಿಕ ಚಿಂತನೆಗಳ ಕುರಿತು ಪ್ರವಚನ ನೀಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande