ವಿಶೇಷ ತರಬೇತಿ ಕಾರ್ಯಕ್ರಮ ಆಯೋಜನೆ
ಗದಗ, 18 ಜುಲೈ (ಹಿ.ಸ.) : ಆ್ಯಂಕರ್ : ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಧಾರವಾಡ ಹಾಲು ಒಕ್ಕೂಟ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ
ಪೋಟೋ


ಗದಗ, 18 ಜುಲೈ (ಹಿ.ಸ.) :

ಆ್ಯಂಕರ್ : ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಧಾರವಾಡ ಹಾಲು ಒಕ್ಕೂಟ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜುಲೈ 18 ರಂದು ಎ.ಪಿ.ಎಂ.ಸಿ ಸಭಾಭವನ ಬೆಳ್ಳಟ್ಟಿ ತಾ.ಶಿರಹಟ್ಟಿ ಜಿ.ಗದಗದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಧಾರವಾಡ ಹಾಲು ಒಕ್ಕೂಟ. ಧಾರವಾಡ ಇದರ ನಿರ್ದೇಶಕರಾದ ಲಿಂಗರಾಜಗೌಡ ಎಚ್. ಪಾಟೀಲ ರವರು ಉದ್ಘಾಟಿಸಿ ಮಾತನಾಡುತ್ತಾ ಹಾಲನ್ನು “ಜಾಗತಿಕ ಆಹಾರ” ವನ್ನಾಗಿ ವಿಶ್ವಕ್ಕೆ ಪರಿಚಯಿಸುವುದು ಮತ್ತು ಹೈನೋದ್ಯಮದ ಕಾರ್ಯಚಟುವಟಿಕೆ ಸಾಧನಗಳನ್ನು ಪ್ರಚುರಪಡಿಸುವುದರರೊಂದಿಗೆ ಪ್ರೋತ್ಸಾಹಿಸುವುದಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆಯ ಇಂತಹ ಪ್ರೇರಣ ಪೂರಕ ಉಪಕ್ರಮಗಳಿಂದಾಗಿ ಇಂದು ವಿಶ್ವದಾದ್ಯಂತ 100 ಕೋಟಿಗೂ ಅಧಿಕ ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಗುಣಮಟ್ಟದ ಹಾಲು ಉತ್ಪಾದನೆಯೊಂದಿಗೆ ಅವರ ಜೀವನ ಸುಧಾರಣೆಗೂ ಸಹಕಾರಿಯಾಗಿರುತ್ತದೆ, ವಿಶ್ವವನ್ನು ಅದರಲ್ಲಿಯೂ ಯುವ ಸಮುದಾಯವನ್ನು ಆಕರ್ಷಿಸಿಸುತ್ತಿರುವ ಕ್ರಿಕೆಟ್ ಕ್ರೀಡೆಯನ್ನು ಪ್ರೋತ್ಸಾಹಿಸುವುದರ ಮೂಲಕ ತನ್ನ ‘ನಂದಿನಿ” ಬ್ರಾö್ಯಂಡುಗಳನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನದಲ್ಲಿ ಕೆ.ಎಂ.ಎಫ್ ಯಶಸ್ಸನ್ನು ಕಂಡಿದೆ. ಹೈನುಗಾರಿಕಾ ವಲಯ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದೆ.

ಆದ್ದರಿಂದ ದೇಶದ ಆರ್ಥಿಕತೆಗೆ ಪೂರಕವಾಗಿ ಒತ್ತು ನೀಡಲು ಗ್ರಾಮೀಣ ಪ್ರದೇಶದ ಹೈನುಗಾರಿಕೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಲು ಉತ್ಪಾದಕರು ಹೆಚ್ಚಿನ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾಗಬೇಕಾದರೆ, ಉತ್ಪಾದನೆ ಹೆಚ್ಚಾಗಬೇಕು ಅದರಿಂದ ಸಂಘವು ಹೆಚ್ಚಿನ ಲಾಭ ಹೊಂದಲು ಸಾಧ್ಯವಾಗುತ್ತದೆ. ಈ ಆಯಾಮಗಳಲ್ಲಿ ಹೊಸ ಯೊಜನೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಹಿರಿಯ ಸಹಕಾರಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಬೆಳ್ಳಟ್ಟಿ ಇದರ ಅಧ್ಯಕ್ಷರಾದ ಪ್ರಕಾಶ ಬಿ. ಮಹಾಜನಶೆಟ್ಟರವರು ಸಹಕಾರ ಪಿತಾಮಹಾ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡುತ್ತಾ ಕೃಷಿ ಆಧಾರಿತವಾಗಿ ಭಾರತದ ಜನರ ಜೀವನದ ಉಪಕಸಬುಗಳಲ್ಲೊಂದಾದ ಹೈನುಗಾರಿಕೆ ತುಂಬಾ ಶ್ರೀಮಂತದಾಯಕ ಕಾಯಕವಾಗಿದೆ, ಭಾರತ ದೇಶವಿಂದು ವಿಶ್ವದಲ್ಲಿಯೇ ಅತೀ ಹೆಚ್ಚು ಹಾಲು ಉತ್ಪಾದಿಸುತ್ತಿರುವ ಅಗ್ರಮಾನ್ಯ ರಾಷ್ಟçವಾಗಿದ್ದು ಸುಮಾರು230.58 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದನೆ ಮಾಡಿ ಶೇ.4 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಕರ್ನಾಟಕ ರಾಜ್ಯದ ಜನರ ಸ್ವಾವಲಂಬಿ ಮತ್ತು ಸಮಗ್ರ ಸಹಕಾರಿ ಹಾಲು ಉತ್ಪಾದನೆ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಹಾಲು ಉತ್ಪಾದಕ ಸದಸ್ಯರ ಜೀವನದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಳಿಗೆಗೆ ಶ್ರಮಿಸುವ ಮೂಲಕ ಕೆ.ಎಂ.ಎಫ್ ಕೋಟ್ಯಾಂತರ ಜನರ ಜೀವನಾಸರೆಯಾಗಿದೆ ಎಂದು ಹೇಳಿದರು.

ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಿ. ಟಿ. ಕಳಸದ ರವರು ಮಾತನಾಡುತ್ತಾ 1983 ರಲ್ಲಿ ನಂದಿನಿ ಹೆಸರನ್ನು ತನ್ನ ಉತ್ಪನ್ನಗಳ ಬ್ರ್ಯಾಂಡ ಆಗಿ ಕೆ.ಎಂ.ಎಫ್ ಘೋಷಿಸಿತು. ನಂದಿನಿ ಎಂಬುದು ಹಿಂದೂ ದೇವತೆಯ ಹೆಸರು, ಹಾಗೆಯೇ ಗೋವಿನ ಹೆಸರುಗಳಲ್ಲಿ ಒಂದು ಹೀಗಾಗಿ, ನಂದಿನಿ ಹೆಸರನ್ನು ಆಯ್ಕೆ ಮಾಡಲಾಗಿದೆ. “ನಂದಿನಿ”ಯು ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಬ್ರಾö್ಯಂಡ್ ಆಗಿರುವುದಲ್ಲದೇ ರಾಷ್ಟç ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗ್ರಾಹಕರಿಗೆ ಗುರುತಿಸುವ ಪ್ರತಿಷ್ಠಿತ ಬ್ರಾಂಡ್ ಆಗಿ ಹೊರಹೊಮ್ಮಿದೆ. ಕೆ.ಎಂ.ಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಹಾಲು ಉತ್ಪಾದಕರಿಗೆ ಪಶು ವೈದ್ಯಕೀಯ ಸೌಲಭ್ಯ, ವಿವಿಧ ರೀತಿಯ ಮೇವಿನ ಬೀಜಗಳು, ರಾಸುಗಳ ಗುಂಪು ವಿಮೆ, ಲಸಿಕೆ ಕಾರ್ಯಕ್ರಮಗಳನ್ನು ಶೇ.50 ರಷ್ಟು ಅನುದಾನದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂನಿಯನ್‌ದ ಉಪಾಧ್ಯಕ್ಷರಾದ ವಾಯ್. ಎಫ್. ಪಾಟೀಲರವರು ವಹಸಿ ಮಾತನಾಡುತ್ತಾ ಸಮಾಜದಲ್ಲಿ ಆರ್ಥಿಕವಾಗಿ ಅಬಲರಾದವರು, ಅವಕಾಶವಂಚಿತ ಜನರಿದ್ದು, ಇಂತಹ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಉತ್ತಮಗೊಳಿಸಲು ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ, ಗ್ರಾಮೀಣ ಪ್ರದೇಶದ ಮಹಿಳೆಯರು ಸಂಘಟಿತರಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಆರ್ಥಿಕ ಅಭಿವೃಧ್ಧಿಯನ್ನು ಹೊಂದಲು ಪ್ರಯತ್ನಿಸಬೇಕೆಂದು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ಸಹಯೋಗದೊಂದಿಗೆ ಜರುಗುವ ಇಂತಹ ಕಾರ್ಯಕ್ರಮದಲ್ಲಿ ಎಲ್ಲಾ ಸಂಘದವರು ಭಾಗವಹಿಸಿ ಕಾಲಕಾಲಕ್ಕೆ ಜರುಗುವ ತರಬೇತಿಯಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆದು ತಮ್ಮ ಸಂಘಗಳ ಏಳ್ಗೆಗೆ ಶ್ರಮಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೂನಿಯನ್ನಿನ ನಿರ್ದೇಶಕರಾದ ಶಿದ್ದನಗೌಡ ಬಿ. ಪಾಟೀಲ, ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಕೆ.ಸಿ.ಕೂಸನೂರಮಠ, ಮಾರಾಟಾಧಿಕಾರಿಗಳಾದ ಬಿ.ಆರ್. ನಿಡಗುಂದಿ, ಧಾರವಾಡ ಹಾಲು ಒಕ್ಕೂಟದ ಧಾರವಾಡ ವ್ಯವಸ್ಥಾಪಕರು (ಶೇ & ತಾಂ) ಡಾ. ರಾಕೇಶ ತಲ್ಲೂರ, ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಪ್ರಸನ್ನ ಪಟ್ಟೇದ, ಹಾಲು ಒಕ್ಕೂಟದ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ವಿಸ್ತರಣಾಧಿಕಾರಿಗಳಾದ ಸಿ.ಎಸ್.ಕಲ್ಲನಗೌಡರ, ಬಸವರಾಜ ಎಸ್. ಜುಮ್ಮಣ್ಣವರ, ಉಮೇಶ ಹುಂಡೇಕಾರ ರವರು ಉಪಸ್ಥಿತರಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ಮಾರುಕಟ್ಟೆಯ ಮೇಲೆ ಹಾಲಿನ ಗುಣಮಟ್ಟ ಪ್ರಭಾವ ಕುರಿತು, ಡಾ. ವೀರೇಶ ತರಲಿ ವಿಶ್ರಾಂತ ವ್ಯವಸ್ಥಾಪಕ ನಿರ್ದೇಶಕರು, ಧಾರವಾಡ ಹಾಲು ಒಕ್ಕೂಟ, ಧಾರವಾಡ, ಶುದ್ದ ಹಾಗೂ ಅಧಿಕ ಹಾಲು ಉತ್ಪಾದನೆ ಮತ್ತು ಅಘೋಚರ ಕೆಚ್ಚಲುಬಾವು ಕುರಿತು, ಡಾ.ಎಂ.ಬಿ.ಮಡಿವಾಳರ ನಿವೃತ್ತ ಜಂಟಿ ನಿರ್ದೇಶಕರು, ಕ.ಹಾ.ಮ ತರಬೇತಿ ಕೇಂದ್ರ ರಾಯಾಪೂರ, ಧಾರವಾಡ ಮತ್ತು ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು. ಬಿ. ಪಿ. ಹಿರೇಮಠ ನಿವೃತ್ತ ಸಹಾಯಕ ವ್ಯವಸ್ಥಾಪಕರು ಧಾರವಾಡ ಹಾಲು ಒಕ್ಕೂಟ, ಧಾರವಾಡ ಉಪನ್ಯಾಸವನ್ನು ನೀಡಿದರು.

ಪ್ರಾರಂಭದಲ್ಲಿ ಯಳವತ್ತಿ ಹಾಗೂ ಕಡಕೋಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಾದ ಶ್ರೀಮತಿ ಗಂಗಾ ಫ. ಮಲ್ಲರಡ್ಡಿ ಹಾಗೂ ಶ್ರೀಮತಿ ಭಾಗೀರಥಿ ಯ. ಭಂಡಾರಿ ಇವರು ಪ್ರಾರ್ಥನೆ ಮಾಡಿದರು ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಸ್ವಾಗತಿಸಿ ನಿರೂಪಿಸಿದರು. ವಿಸ್ತರಣಾಧಿಕಾರಿಗಳಾದ ಸಿ. ಎಸ್. ಕಲ್ಲನಗೌಡರ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande