ಕೊಪ್ಪಳ : ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ
ಕೊಪ್ಪಳ, 18 ಜುಲೈ (ಹಿ.ಸ.) : ಆ್ಯಂಕರ್ : ಜೈನ ಕಾಶಿ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಜೈನ ಧರ್ಮದ ತತ್ವಗಳನ್ನು ತಿಳಿಸುವ, ಮುಂದಿನ ಪಿಳಿಗೆಯು ಜೈನ ಧರ್ಮದ ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ಧಾರ್ಮಿಕ ಪಾಠಶಾಲೆ ಮಾಡಲು ಪ್ರಕ್ರಿಯೆ ಪ್ರಾರಂಭವಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ನೇಮ
ಕೊಪ್ಪಳ: ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ


ಕೊಪ್ಪಳ, 18 ಜುಲೈ (ಹಿ.ಸ.) :

ಆ್ಯಂಕರ್ : ಜೈನ ಕಾಶಿ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಜೈನ ಧರ್ಮದ ತತ್ವಗಳನ್ನು ತಿಳಿಸುವ, ಮುಂದಿನ ಪಿಳಿಗೆಯು ಜೈನ ಧರ್ಮದ ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ಧಾರ್ಮಿಕ ಪಾಠಶಾಲೆ ಮಾಡಲು ಪ್ರಕ್ರಿಯೆ ಪ್ರಾರಂಭವಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ನೇಮಕವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಅದನ್ನು ಪ್ರಾರಂಭ ಮಾಡಲಾಗುವುದು ಎಂದು ಶ್ರಾವಕ ಸುಹಾಸ ಇಜಾರೆ ಹುಲಗಿ ಅವರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಸುಮಾರು ಏಳು ನೂರು ಜೈನ ಬಸದಿಗಳು ಅಸ್ತಿತ್ವದಲ್ಲಿದ್ದವು, ಕಾಲಕ್ರಮೇಣ ಅವು ಇತಿಹಾಸದ ಪುಟ ಸೇರಿದವು. ಮೂಲ ಇದು ಜೈನ ಸ್ಥಳವಾಗಿದ್ದು, ಅದರ ಪುನರ್ ಸ್ಥಾಪನೆ ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಅಂಠರಣಾಣದಲ್ಲಿ ಆದಿನಾಥರ ವಿಗ್ರಹವಿದ್ದು, ಅಲ್ಲಿನ ಜೈನರ ಉಪಸ್ಥಿತಿ ಇಲ್ಲದ ಕಾರಣ ಗ್ರಾಮಸ್ಥರು ಅದರ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ, ಅದನ್ನು ಕೊಪ್ಪಳ ಜೈನ ಬಸದಿಗೆ ಹಸ್ತಾಂತರ ಮಾಡಬೇಕು, ಹಾಗೇಯೇ ತಾಲೂಕಿನ ಜಬ್ಬಲಗುಡ್ಡದಲ್ಲಿ ಜೈನ ಬಸದಿಯ ಜಿರ್ಣೋದ್ದಾರ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.

ಧಾರ್ಮಿಕ ಪಾಠಶಾಲೆಗೆ ಅಭಿನಂದನ ಗೋಗಿ, ಸಮೇದ ಜೈನ ಪದ್ಮ ಗೌಡ ಹೀರೆಗೌಡ್ರ, ಭುಜಬಲಿ ಪಾಟೀಲ್, ಉದಯರಾಜ ಕಾರಟಗಿ, ಉದಯಕುಮಾರ್ ಕಂಪಸಾಗರ, ಪಾಯಸಾಗರ, ಪದ್ಮಾವತಿ ಆನಂದ ಬಸ್ತಿ ನಿಲೋಗಲ್, ಗುರುರಾಜ್ ದೇಸಾಯಿ,ಅನಿಲ್ ಕುಮಾರ್ ಕಲ್ಭಾವಿ,ವಿನಯ ತುಂಬಳ,ಪುಷ್ಪದಂತ ಪಾಟೀಲ್, ಸನ್ಮತಿ ಇಜಾರೆ, ಶ್ರೀಕರ ಇಜಾರೆ, ಅನಿಲ್ ಕುಮಾರ್ ರೋಗೆ ಹೊಸಪೇಟೆ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಆಸಕ್ತ ಶ್ರಾವಕ, ಶ್ರಾವಕಿಯರು ಇದರ ಸದಸ್ಯತ್ವ ಪಡೆಯಲು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande