ಹೊಸಪೇಟೆ, 18 ಜುಲೈ (ಹಿ.ಸ.) :
ಆ್ಯಂಕರ್ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2024-25ನೇ ಸಾಲಿನ ಜಿಲ್ಲಾ ಖನಿಜ ಯೋಜನೆಯಡಿ ಕೂಡ್ಲಿಗಿ ಕ್ಷೇತ್ರದ ವ್ಯಾಪ್ತಿಯ ವಿಕಲಚೇತನರಿಗೆ 95 ಯಂತ್ರಚಾಲಿತ ತ್ರಿ-ಚಕ್ರ ವಾಹನ ಸೌಲಭ್ಯ ಒದಗಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಕೂಡ್ಲಿಗಿಯ ದೈಹಿಕ ಅರ್ಹ ವಿಕಲಚೇತನ ಫಲಾನುಭವಿಗಳು ಮೇಲ್ಕಾಣಿಸಿದ ಯೋಜನೆ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನರು ಅವಶ್ಯಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಆಪ್‍ಲೈನ್ ಮೂಲಕ ಜು.18. ರಿಂದ ಜು.24 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಚೌಡೇಶ-8217626361, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು, ತಾಲೂಕು ಪಂಚಾಯತಿಯಲ್ಲಿ ಕೂಡ್ಲಿಗಿ ಇವರನ್ನು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಅಗಾಫೆ ಎಜಿ ಪ್ರಾರ್ಥನಾಲಯ ಎದುರು ರಸ್ತೆ, ರವಿ ಸಿವಿಲ್ ಎಂಜಿನಿಯರ್ ಕಟ್ಟಡ, ಅಮರಾವತಿ, ಹೊಸಪೇಟೆ ಇವರನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಬೇಕೆಂದು ವಿಜಯನಗರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಇವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್