ಪುನರಾಂಭಗೊಂಡ ಅಮರನಾಥ ಯಾತ್ರೆ
ಜಮ್ಮು, 18 ಜುಲೈ (ಹಿ.ಸ.) : ಆ್ಯಂಕರ್ : ಭಾರಿ ಮಳೆ ಮತ್ತು ಭೂ ಕುಸಿತದಿಂದ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಮತ್ತೆ ಪುನರಾರಂಭಗೊಂಡಿದೆ. 7,900 ಯಾತ್ರಿಕರ ಎರಡು ತಂಡಗಳು ಪಹಲ್ಗಾಮ್​ ಮತ್ತು ಬಾಲ್ಟಾಲ್​​ನ​ ಎರಡು ​ ​ಶಿಬಿರದಿಂದ ಹಿಮಲಿಂಗ ದರ್ಶನಕ್ಕೆ ತೆರಳಿವೆ. ಭಾರಿ ಮಳ
Yatre


ಜಮ್ಮು, 18 ಜುಲೈ (ಹಿ.ಸ.) :

ಆ್ಯಂಕರ್ : ಭಾರಿ ಮಳೆ ಮತ್ತು ಭೂ ಕುಸಿತದಿಂದ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಮತ್ತೆ ಪುನರಾರಂಭಗೊಂಡಿದೆ. 7,900 ಯಾತ್ರಿಕರ ಎರಡು ತಂಡಗಳು ಪಹಲ್ಗಾಮ್​ ಮತ್ತು ಬಾಲ್ಟಾಲ್​​ನ​ ಎರಡು ​ ​ಶಿಬಿರದಿಂದ ಹಿಮಲಿಂಗ ದರ್ಶನಕ್ಕೆ ತೆರಳಿವೆ.

ಭಾರಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ ಓರ್ವ ಮಹಿಳಾ ಯಾತ್ರಿಕರು ಸಾವನ್ನಪ್ಪಿದ್ದರು. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಗುರುವಾರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಆರ್​ಒ ಹಾಗೂ ಸೇನಾ ಸಿಬ್ಬಂದಿ ರಸ್ತೆ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು, ಮತ್ತೆ ಯಾತ್ರೆ ಆರಂಭವಾಗಿದೆ.

ಜುಲೈ 3ರಿಂದ ಪ್ರಾರಂಭವಾದ ಯಾತ್ರೆಯಲ್ಲಿ ಇದುವರೆಗೆ ಸುಮಾರು 2.50 ಲಕ್ಷ ಯಾತ್ರಿಕರು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆಗೆ 4 ಲಕ್ಷ ಜನರು ಆನ್​ಲೈನ್​ ಮೂಲಕ ನೋಂದಣಿ ಮಾಡಿದ್ದಾರೆ. 38 ದಿನಗಳ ಸಾಗುವ ಯಾತ್ರೆಯು ಆಗಸ್ಟ್​ 9ರಂದು ಮುಕ್ತಾಯಗೊಳ್ಳಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande