ವಾರ್-2' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ
ಮುಂಬಯಿ, 16 ಜುಲೈ (ಹಿ.ಸ.) : ಆ್ಯಂಕರ್ : ಆಕ್ಷನ್ ಥ್ರಿಲ್ಲರ್ ಸಿನಿಮಾ ‘ವಾರ್-2’ ನ ಬಹುನಿರೀಕ್ಷಿತ ಹೊಸ ಪೋಸ್ಟರ್ ಇಂದು ಬಿಡುಗಡೆಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ತ್ರಿಮೂರ್ತಿಗಳು ಈ ಪೋಸ್ಟರ್‌ನಲ್ಲಿ ಒಟ್ಟಿ
War-2


ಮುಂಬಯಿ, 16 ಜುಲೈ (ಹಿ.ಸ.) :

ಆ್ಯಂಕರ್ : ಆಕ್ಷನ್ ಥ್ರಿಲ್ಲರ್ ಸಿನಿಮಾ ‘ವಾರ್-2’ ನ ಬಹುನಿರೀಕ್ಷಿತ ಹೊಸ ಪೋಸ್ಟರ್ ಇಂದು ಬಿಡುಗಡೆಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ತ್ರಿಮೂರ್ತಿಗಳು ಈ ಪೋಸ್ಟರ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಚಿತ್ರದ ಮೇಲೆ ಪ್ರೇಕ್ಷಕರ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ಈ ಚಿತ್ರ 2019ರ ಸೂಪರ್‌ಹಿಟ್ 'ವಾರ್' ಚಿತ್ರಕ್ಕೆ ಮುಂದುವರಿದ ಭಾಗವಾಗಿದ್ದು, ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಹೃತಿಕ್ ಜೊತೆಗೆ ಕಿಯಾರಾ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಲಿದ್ದು, ದಕ್ಷಿಣ ಭಾರತದ ಮೆಗಾಸ್ಟಾರ್ ಜೂನಿಯರ್ ಎನ್‌ಟಿಆರ್ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿರುವುದು ವಿಶೇಷ.

'ವಾರ್-2' ಆಗಸ್ಟ್ 14ರಂದು, ಸ್ವಾತಂತ್ರ್ಯ ದಿನಾಚರಣೆಯ ದಿನದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಹಿಂದಿ ಜೊತೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande