ಲಂಡನ್, 15 ಜುಲೈ (ಹಿ.ಸ.) :
ಆ್ಯಂಕರ್ : ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 22 ರನ್‌ಗಳ ಅಂತರದಲ್ಲಿ ಸೋಲು ಕಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತಂಡದ ನಾಯಕ ಶುಭಮನ್ ಗಿಲ್, ತಂಡದ ಹೋರಾಟವನ್ನು ಶ್ಲಾಘಿಸಿದರು. ವಿಶೇಷವಾಗಿ ಕೆಳ ಕ್ರಮಾಂಕದ ಆಟಗಾರರ ಹೋರಾಟದ ಮನೋಭಾವವನ್ನು ಶ್ಲಾಘಿಸಿದರು.
ಪಂದ್ಯದ ಐದನೇ ದಿನದ ಆರಂಭದಲ್ಲಿ ಭಾರತ 82 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಕ್ಕಿತ್ತು. ಆದರೆ, ರವೀಂದ್ರ ಜಡೇಜಾ ಅವರು ನಿತೀಶ್ ರೆಡ್ಡಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೊಂದಿಗೆ ಕ್ರಮವಾಗಿ 30, 35 ಮತ್ತು 23 ರನ್‌ಗಳ ಸಹಭಾಗಿತ್ವವನ್ನು ರೂಪಿಸಿ ಗೆಲುವಿಗೆ ಭಾರತವನ್ನು ಹತ್ತಿರಕ್ಕೆ ತಂದರು.
ಜಡೇಜಾ ನಮ್ಮ ತಂಡದ ಅಮೂಲ್ಯ ಆಟಗಾರರಲ್ಲಿ ಒಬ್ಬರು. ಈ ಸರಣಿಯಲ್ಲಿ ಇದು ಅವರ ನಾಲ್ಕನೇ ಅರ್ಧಶತಕ. ಅವರು ತಾಳ್ಮೆಯಿಂದ 99 ಓವರ್‌ಗಳ ವರೆಗೆ ಬ್ಯಾಟಿಂಗ್ ಮಾಡಿ 61 ರನ್ ಗಳಿಸಿದ್ದು, ಅವರ ಸ್ಥಿರತೆಯ ಸಾಕ್ಷ್ಯ, ಎಂದು ಗಿಲ್ ಹೇಳಿದರು.
ಗಿಲ್ ಅವರು ಮುಂಚೂಣಿ ಆಟಗಾರರ ಲಯ ಕೊರತೆಯ ಕುರಿತು ಹೇಳಿದರು. “ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು, ಆದರೆ ನಂತರ ವಿಕೆಟ್‌ಗಳು ಸರಮಾಲೆಯಂತೆ ಬಿದ್ದವು. ಮೊದಲ 20–25 ಓವರ್‌ಗಳಲ್ಲಿ ನಾವು ಸ್ಥಿರತೆಯಿಂದ ಆಡಿದ್ದರೆ ಗುರಿ ತಲುಪುವುದು ಸಾಧ್ಯವಿತ್ತು ಎಂದು ಹೇಳಿದರು.
ಪಂದ್ಯದ ಸಂದರ್ಭದಲ್ಲಿ ಉಂಟಾದ ಬಿಸಿಬಿಸಿ ಮಾತುಗಳ ಕುರಿತು ಅವರು ಪ್ರತಿಕ್ರಿಯಿಸುತ್ತಾ, ಕ್ರಿಕೆಟ್‌ನಲ್ಲಿ ಇಂಥ ಉದ್ವಿಗ್ನತೆ ಸಹಜ. ಆದರೆ, ಆಟದ ಬಳಿಕ ಪರಸ್ಪರ ಗೌರವ ಇರಬೇಕು. ನಾವು ಅದನ್ನು ಮುಂದೆಯೂ ಕಾಯ್ದುಕೊಳ್ಳುತ್ತೇವೆ,” ಎಂದು ಹೇಳಿದರು.
ಭವಿಷ್ಯದ ಬಗ್ಗೆಯೂ ನಂಬಿಕೆ:
“ಸರಣಿಯ 15 ದಿನಗಳಲ್ಲಿ ಹೆಚ್ಚು ದಿನ ನಾವು ಉತ್ತಮವಾಗಿ ಆಡಿದ್ದೇವೆ. ಆದರೆ ಕೆಲವು ನಿರ್ಣಾಯಕ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿದೆ. ಈ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾವು ಕಲಿಯಬೇಕು,” ಎಂದು ಗಿಲ್ ಹೇಳಿದರು. “10 ರನ್‌ಗಳು ಇನ್ನಷ್ಟು ಸೇರಿದರೆ ಇಂಗ್ಲೆಂಡ್ ಮೇಲೆ ಒತ್ತಡ ಉಂಟಾಗುತ್ತಿತ್ತು,” ಎಂದರು.
ಭಾರತ ಈ ಸರಣಿಯಲ್ಲಿ ಈಗ 1-2 ಅಂತರದಲ್ಲಿ ಹಿನ್ನಡೆಯಲ್ಲಿದೆ. ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಂಬಿಕೆಯನ್ನು ಗಿಲ್ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa