ಬೀಜಿಂಗ್, 14 ಜುಲೈ (ಹಿ.ಸ.) :
ಆ್ಯಂಕರ್ : ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಚೀನಾದ ರಾಜಧಾನಿ ಬೀಜಿಂಗ್‌ಗೆ ಭೇಟಿ ನೀಡಿ ಉಪಾಧ್ಯಕ್ಷ ಹಾನ್ ಝೆಂಗ್ ಅವರನ್ನು ಭೇಟಿಯಾದರು. ಈ ಭೇಟಿಯಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ, ಶಾಂಘೈ ಸಹಕಾರ ಸಂಸ್ಥೆಯಲ್ಲಿನ ಸಹಭಾಗಿತ್ವ ಮತ್ತು ಪ್ರಾದೇಶಿಕ ಸಹಕಾರದ ಕುರಿತು ಚರ್ಚೆ ನಡೆಯಿತು.
ಜೈಶಂಕರ್ ಅವರು ಎಕ್ಸ್‌ನಲ್ಲಿ “ಇಂದು ಬೀಜಿಂಗ್ ತಲುಪಿದ ತಕ್ಷಣ ಉಪಾಧ್ಯಕ್ಷ ಹಾನ್ ಝೆಂಗ್ ಅವರನ್ನು ಭೇಟಿಯಾಗಿ ಚೀನಾದ ಎಸ್ ಸಿಒ ಅಧ್ಯಕ್ಷತೆಗೆ ಭಾರತದ ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ. ನಮ್ಮ ಮಾತುಕತೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವತ್ತ ಗಮನ ಹರಿಸಿದೆ,” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa