ಲಂಡನ್, 14 ಜುಲೈ (ಹಿ.ಸ.) :
ಆ್ಯಂಕರ್ : ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯವು ರೋಚಕ ಹಂತವನ್ನು ತಲುಪಿದೆ. ನಾಲ್ಕನೇ ದಿನದ ಆಟದ ಅಂತ್ಯಕ್ಕೆ ಭಾರತ 58 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಪಂದ್ಯವನ್ನು ಗೆಲ್ಲಲು ಭಾರತ ಇನ್ನೂ 135 ರನ್ ಗಳಿಸಬೇಕಿದೆ.
ಭಾರತದ ಇನ್ನಿಂಗ್ಸ್ ಸ್ಥಿತಿ:
193 ರನ್‌ಗಳ ಗುರಿಯತ್ತ ಬೆನ್ನು ಹತ್ತಿದ ಭಾರತ ಆರಂಭಿಕ ಹಂತದಲ್ಲೇ ಸಂಕಷ್ಟ ಎದುರಿಸಿತು. ಯಶಸ್ವಿ ಜೈಸ್ವಾಲ್ (0), ಕರುಣ್ ನಾಯರ್ (14), ಮತ್ತು ನಾಯಕ ಶುಭ್‌ಮನ್ ಗಿಲ್ (6) ತ್ವರಿತವಾಗಿ ಪೆವಿಲಿಯನ್‌ಗೆ ಮರಳಿದರು. ಆಕಾಶ್‌ದೀಪ್ ಅವರನ್ನು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೇವಲ 10 ಎಸೆತಗಳಲ್ಲಿ ಕ್ಲೀನ್ ಬೌಲ್ ಮಾಡಿದರು.
ಆಟದ ಅಂತ್ಯಕ್ಕೆ ಕೆಎಲ್ ರಾಹುಲ್ (33*) ಅಜೇಯರಾಗಿದ್ದು, ಅವರ ಜೊತೆಯಲ್ಲಿ ಹೊಸ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕ್ರೀಸಿನಲ್ಲಿ ಇದ್ದಾರೆ. ಈ ಜೋಡಿಯ ಪ್ರಸ್ತುತ ಆಟವೇ ಪಂದ್ಯದ ಫಲಿತಾಂಶದ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದೆ.
ಇಂಗ್ಲೆಂಡ್ ಇನ್ನಿಂಗ್ಸ್ ನ ಹೈಲೈಟ್ಸ್:
ಮೂರನೇ ದಿನದಂತ್ಯದ 2/0ರಿಂದ ಆರಂಭಿಸಿದ ಇಂಗ್ಲೆಂಡ್ ತಂಡ, ಭಾರತೀಯ ಬೌಲರ್‌ಗಳ ದಾಳಿಗೆ 192 ರನ್‌ಗಳಿಗೆ ಸರ್ವ ಪತನ ಕಂಡಿತು. ಜೋ ರೂಟ್ (40) ಮತ್ತು ಸ್ಟೋಕ್ಸ್ (33) ಪ್ರಮುಖ ಸ್ಕೋರ್ ಮಾಡಿದರೂ ಉಳಿದವರ ಹೋರಾಟ ಪಲಿತರಾಗಲಿಲ್ಲ. ಭಾರತ ಪರ ವಾಷಿಂಗ್ಟನ್ ಸುಂದರ್ 4 ವಿಕೆಟ್, ಸಿರಾಜ್ ಮತ್ತು ಬುಮ್ರಾ ತಲಾ 2 ವಿಕೆಟ್, ಜಡೇಜಾ ಮತ್ತು ನಿತೀಶ್ ರೆಡ್ಡಿ ತಲಾ 1 ವಿಕೆಟ್ ಪಡೆದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa