ರಾಜ್ಯ ಸಭೆಗೆ ನಾಲ್ವರು ಸದಸ್ಯರ ನಾಮನಿರ್ದೇಶನ
ನವದೆಹಲಿ, 13 ಜುಲೈ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಲ್ವರು ಗಣ್ಯ ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಗೃಹ ಸಚಿವಾಲಯ ಪ್ರಕಟಿಸಿರುವ ಅಧಿಸೂಚನೆಯಂತೆ, ಉಜ್ವಲ್ ದೇವರಾವ್ ನಿಕಮ್, ಸಿ. ಸದಾನಂದನ್ ಮಾಸ್ಟರ್, ಹರ್ಷವರ್ಧನ್ ಶೃಂಗ್ಲಾ ಮತ್ತು ಡಾ. ಮೀನಾಕ್ಷಿ
ರಾಜ್ಯ ಸಭೆಗೆ ನಾಲ್ವರು ಸದಸ್ಯರ ನಾಮನಿರ್ದೇಶನ


ನವದೆಹಲಿ, 13 ಜುಲೈ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಲ್ವರು ಗಣ್ಯ ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಗೃಹ ಸಚಿವಾಲಯ ಪ್ರಕಟಿಸಿರುವ ಅಧಿಸೂಚನೆಯಂತೆ, ಉಜ್ವಲ್ ದೇವರಾವ್ ನಿಕಮ್, ಸಿ. ಸದಾನಂದನ್ ಮಾಸ್ಟರ್, ಹರ್ಷವರ್ಧನ್ ಶೃಂಗ್ಲಾ ಮತ್ತು ಡಾ. ಮೀನಾಕ್ಷಿ ಜೈನ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ನಾಮನಿರ್ದೇಶಿತ ಸದಸ್ಯರಲ್ಲಿ ಉಜ್ವಲ್ ನಿಕಮ್ ಭಯೋತ್ಪಾದಕ ಅಜ್ಮಲ್ ಕಸಬ್ ಪ್ರಕರಣದ ಪ್ರಮುಖ ವಕೀಲರಾಗಿದ್ದರೆ, ಸದಾನಂದನ್ ಮಾಸ್ಟರ್ ಸಮಾಜ ಸೇವಕ ಹಾಗೂ ಶಿಕ್ಷಣ ತಜ್ಞ. ಶೃಂಗ್ಲಾ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಮೀನಾಕ್ಷಿ ಜೈನ್ ಇತಿಹಾಸಕಾರರಾಗಿ ಪ್ರಸಿದ್ಧರಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande