ಮಣಿಪುರ : ಭದ್ರತಾ ಪಡೆಗಳ ಕಾರ್ಯಾಚರಣೆ ; ಐವರು ಉಗ್ರರ ಬಂಧನ
ಇಂಫಾಲ್, 13 ಜುಲೈ (ಹಿ.ಸ.) : ಆ್ಯಂಕರ್ : ಮಣಿಪುರದ ಇಂಫಾಲ ಪೂರ್ವ, ತೌಬಲ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಜುಲೈ 11 ಹಾಗೂ 12ರಂದು ಭದ್ರತಾ ಪಡೆಗಳು ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ ಐದು ಮಂದಿ ಉಗ್ರರನ್ನು ಬಂಧಿಸಲಾಗಿದೆ. ಇಂಫಾಲ ಪೂರ್ವ ಜಿಲ್ಲೆಯ ಲೈಖೋಂಗ್ ಗ್ರಾಮದಲ್ಲಿ ಇಬ್ಬರು ಕೆವೈಕ
Arrest


ಇಂಫಾಲ್, 13 ಜುಲೈ (ಹಿ.ಸ.) :

ಆ್ಯಂಕರ್ : ಮಣಿಪುರದ ಇಂಫಾಲ ಪೂರ್ವ, ತೌಬಲ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಜುಲೈ 11 ಹಾಗೂ 12ರಂದು ಭದ್ರತಾ ಪಡೆಗಳು ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ ಐದು ಮಂದಿ ಉಗ್ರರನ್ನು ಬಂಧಿಸಲಾಗಿದೆ.

ಇಂಫಾಲ ಪೂರ್ವ ಜಿಲ್ಲೆಯ ಲೈಖೋಂಗ್ ಗ್ರಾಮದಲ್ಲಿ ಇಬ್ಬರು ಕೆವೈಕೆಎಲ್ ಉಗ್ರರು ಬಂಧನದಲ್ಲಿದ್ದು, ಕೊಂಗ್‌ಪಾಲ್‌ನಲ್ಲಿ ಮತ್ತೊಬ್ಬ ಕೆಸಿಪಿ-ಎಪಿಯುಎನ್‌ಬಿಎ ಉಗ್ರನನ್ನು ಬಂಧಿಸಲಾಗಿದೆ. ತೌಬಲ್ ಜಿಲ್ಲೆಯಲ್ಲಿ ಆರ್‌ಪಿಎಫ್/ಪಿಎಲ್‌ಎ ಉಗ್ರ ಚುಮ್ತಾಂಗ್‌ಖಾನ್ಬಾ ಎಂಬ ನವೋಟೊಂಬಾ ಬಂಧನದಲ್ಲಿದ್ದಾರೆ. ಬಿಷ್ಣುಪುರ ಜಿಲ್ಲೆಯಲ್ಲಿ ಕೆಸಿಪಿ (ತೈಬಂಗನ್ಬಾ) ಸದಸ್ಯ ಪಿಂಕಿ ಅಲಿಯಾಸ್ ರಮೇಶ್ ಸಿಂಗ್ ಬಂಧಿತನಾಗಿದ್ದಾರೆ.

ಬಂಧಿತರಿಂದ ಮೊಬೈಲ್ ಫೋನ್, ಸಿಮ್ ಕಾರ್ಡ್, ಹಣದ ಚೀಲ ಮತ್ತು ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಶಾಂತಿ ಸ್ತಾಪನೆಗಾಗಿ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande