ಮಹಾದಾನಿಗೆ `ಸಮಾಜಸೇವಾ ರತ್ನ' ಗೌರವ ಸಲ್ಲಿಕೆ ಮತ್ತು ರಂಗನಮನ
ಬಳ್ಳಾರಿ, 13 ಜುಲೈ (ಹಿ.ಸ.) : ಆ್ಯಂಕರ್ : ನಾಟಕ - ರಂಗಭೂಮಿ ಇವೆಲ್ಲಾ ಕೇವಲ ಕಲೆಯಲ್ಲ, ತಪಸ್ಸು ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಾ. ಜೋಳದರಾಶಿ ರಂಗಮಂದಿರದಲ್ಲಿ ಅಭಿನಯ ಕಲಾಕೇಂದ್ರ ಏರ್ಪಡಿಸಿದ್ದ `ಅಗಲ
ಮಹಾದಾನಿಗೆ `ಸಮಾಜಸೇವಾ ರತ್ನ' ಗೌರವ ಸಲ್ಲಿಕೆ ಮತ್ತು ರಂಗನಮನ


ಮಹಾದಾನಿಗೆ `ಸಮಾಜಸೇವಾ ರತ್ನ' ಗೌರವ ಸಲ್ಲಿಕೆ ಮತ್ತು ರಂಗನಮನ


ಮಹಾದಾನಿಗೆ `ಸಮಾಜಸೇವಾ ರತ್ನ' ಗೌರವ ಸಲ್ಲಿಕೆ ಮತ್ತು ರಂಗನಮನ


ಬಳ್ಳಾರಿ, 13 ಜುಲೈ (ಹಿ.ಸ.) :

ಆ್ಯಂಕರ್ : ನಾಟಕ - ರಂಗಭೂಮಿ ಇವೆಲ್ಲಾ ಕೇವಲ ಕಲೆಯಲ್ಲ, ತಪಸ್ಸು ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ. ಜೋಳದರಾಶಿ ರಂಗಮಂದಿರದಲ್ಲಿ ಅಭಿನಯ ಕಲಾಕೇಂದ್ರ ಏರ್ಪಡಿಸಿದ್ದ `ಅಗಲಿದ ರಂಗಭೂಮಿ ಕಲಾವಿದರಿಗೆ ರಂಗ ನಮನ', `ಸಮಾಜಸೇವಾ ರತ್ನ' ಪ್ರಶಸ್ತಿ ಪ್ರದಾನ ಹಾಗೂ `ಮಗ ಹೋದರು, ಮಾಂಗಲ್ಯ ಬೇಕು' ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲೆಯನ್ನು ಜೀವಮಾನದ ಕೊನೆಯವರೆಗೂ ಕಲಿಯಬೇಕು. ಗ್ರಾಮೀಣರಲ್ಲಿ ಜೀವಂತವಾಗಿರುವ ಅನೇಕ ಕಲೆಗಳನ್ನು ಕಲಿಯಲು ಯುವಪೀಳಿಗೆಯು ಆಸಕ್ತಿ ತೋರಿಸಬೇಕು ಎಂದರು.

ಮಸೀದಿಪುರ ಸಿದ್ದರಾಮನಗೌಡರಿಗೆ ಅಭಿನಯ ಕಲಾ ಕೇಂದ್ರ ನೀಡುವ `ಸಮಾಜಸೇವಾ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸುದೀರ್ಘಕಾಲ ಕಲಾಸೇವೆಯನ್ನು ಮಾಡಿ, ಮೃತಪಟ್ಟಿರುವ ಕಲಾವಿದರಾದ ಗಂಗಣ್ಣ, ಶ್ರೀರಾಮುಲು ಮತ್ತು ವೆಂಕೋಬಾಚಾರ್ ಅವರ ರಂಗಸೇವೆ, ಕಲಾನೈಪುಣ್ಯತೆ ಮತ್ತು ಸಮಾಜಸೇವೆಗಳ ಕುರಿತು ಸ್ಮರಿಸಿ, ಕಲಾಶ್ರದ್ಧಾಂಜಲಿಯ ನಮನಗಳನ್ನು ಸಲ್ಲಿಸಿದರು.

ಯಲ್ಲೇಶ್ ಯಾಳಗಿ ಅವರು ಬರೆದಿರುವ `ಮಗ ಹೋದರೂ, ಮಾಂಗಲ್ಯ ಬೇಕು' ನಾಟಕವನ್ನು ಕೊಳಗಲ್ಲಿನ ವಿಕಾಸ ಕಲಾತಂಡದ ಎಚ್.ಎಂ. ಜಗದೀಶಯ್ಯ ಸ್ವಾಮಿ ಅವರ ನಿರ್ದೇಶನದಲ್ಲಿ ಶ್ರೀ ಗುರು ಪಂಚಾಕ್ಷರಿ ವಾದ್ಯ ವೃಂದ ಬಸಾಪಟ್ಟಣ ಇವರ ಸಂಗೀತ ನಿರ್ದೇಶನದಲ್ಲಿ ಪ್ರದರ್ಶನವಾಯಿತು.

ಎ.ಎಂ.ಪಿ. ವೀರೇಶಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು. ಗಾಯಕ ಕುಡತಿನಿ ಪ್ರಕಾಶ್ ಅವರು ಪ್ರಾರ್ಥಿಸಿ - ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande