ಹಿರಿಯ ನಟ ಕೋಟಾ ಶ್ರೀನಿವಾಸ್ ರಾವ್ ನಿಧನ
ಹೈದರಾಬಾದ್, 13 ಜುಲೈ (ಹಿ.ಸ.) : ಆ್ಯಂಕರ್ : ತೆಲುಗು ಚಿತ್ರರಂಗದ ಹೆಸರಾಂತ ನಟ ಹಾಗೂ ಮಾಜಿ ಶಾಸಕ ಕೋಟಾ ಶ್ರೀನಿವಾಸ್ ರಾವ್ (83) ಅವರು ಭಾನುವಾರ ಬೆಳಿಗ್ಗೆ 4 ಗಂಟೆಗೆ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾದರು. 700ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ದಕ್ಷಿಣ ಭಾರತದ ಸಿನಿಮಾ ಪ್ರೇಕ್ಷಕರ
Kota


ಹೈದರಾಬಾದ್, 13 ಜುಲೈ (ಹಿ.ಸ.) :

ಆ್ಯಂಕರ್ : ತೆಲುಗು ಚಿತ್ರರಂಗದ ಹೆಸರಾಂತ ನಟ ಹಾಗೂ ಮಾಜಿ ಶಾಸಕ ಕೋಟಾ ಶ್ರೀನಿವಾಸ್ ರಾವ್ (83) ಅವರು ಭಾನುವಾರ ಬೆಳಿಗ್ಗೆ 4 ಗಂಟೆಗೆ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾದರು. 700ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ದಕ್ಷಿಣ ಭಾರತದ ಸಿನಿಮಾ ಪ್ರೇಕ್ಷಕರ ಹೃದಯ ಗೆದ್ದಿದ್ದರು.

ಅವರ ನಿಧನಕ್ಕೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿ, “ಬಹುಮುಖ ಪಾತ್ರಗಳಿಂದ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಶ್ರೀನಿವಾಸ್ ರಾವ್ ಅವರ ಸಾವು ತೆಲುಗು ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ,” ಎಂದು ತಿಳಿಸಿದ್ದಾರೆ.

1942ರ ಜುಲೈ 10ರಂದು ಆಂಧ್ರ ಪ್ರದೇಶದ ಕಂಕಿಪಡುವಿನಲ್ಲಿ ಜನಿಸಿದ ಕೋಟಾ ಶ್ರೀನಿವಾಸ್ ರಾವ್ ರಂಗಭೂಮಿಯಿಂದ ಸಿನೆಮಾ ಪ್ರವೇಶಿಸಿದರು. ಖಳನಾಯಕ ಪಾತ್ರಗಳಿಂದಲೇ ಹೆಸರು ಮಾಡಿದ ಅವರು, 1999ರಲ್ಲಿ ವಿಜಯವಾಡದಿಂದ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande