ತಮಿಳುನಾಡಿನಲ್ಲಿ ಸರಕು ರೈಲಿಗೆ ಬೆಂಕಿ – ವಿದ್ಯುತ್ ರೈಲು ಸೇವೆಗಳಲ್ಲಿ ವ್ಯತ್ಯಯ
ತಿರುವಲ್ಲೂರು, 13 ಜುಲೈ (ಹಿ.ಸ.) : ಆ್ಯಂಕರ್ : ತಮಿಳುನಾಡಿನ ತಿರುವಲ್ಲೂರು ರೈಲು ನಿಲ್ದಾಣದಲ್ಲಿ ಇಂಧನ ಸಾಗಿಸುತ್ತಿದ್ದ ಸರಕು ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವು ಬೋಗಿಗಳಲ್ಲಿ ಅಗ್ನಿ ವ್ಯಾಪಿಸಿದೆ. ಭಾನುವಾರ ನಡೆದ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ವಿದ್ಯುತ್ ರೈಲು ಸಂಚಾರದಲ್
Fire


ತಿರುವಲ್ಲೂರು, 13 ಜುಲೈ (ಹಿ.ಸ.) :

ಆ್ಯಂಕರ್ : ತಮಿಳುನಾಡಿನ ತಿರುವಲ್ಲೂರು ರೈಲು ನಿಲ್ದಾಣದಲ್ಲಿ ಇಂಧನ ಸಾಗಿಸುತ್ತಿದ್ದ ಸರಕು ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವು ಬೋಗಿಗಳಲ್ಲಿ ಅಗ್ನಿ ವ್ಯಾಪಿಸಿದೆ. ಭಾನುವಾರ ನಡೆದ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ವಿದ್ಯುತ್ ರೈಲು ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಅಗ್ನಿ ನಂದಿಸುವಲ್ಲಿ ತೊಡಗಿದ್ದಾರೆ. ಮೈಸೂರು ವಂದೇ ಭಾರತ್, ಶತಾಬ್ದಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ಸ್ಥಗಿತಗೊಂಡಿದ್ದು, ಕೆಲವು ರೈಲುಗಳನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ತಿರುವಲ್ಲೂರಿನಿಂದ ಚೆನ್ನೈ ಮತ್ತು ಅರಕ್ಕೋಣಂ ಕಡೆಗೆ ಹತ್ತುಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ಚಲಾಯಿಸಲಾಗುತ್ತಿದೆ. ಉಪನಗರ ರೈಲುಗಳು ಅವಧಿಗೆ ಮಾತ್ರ ನಿರ್ಬಂಧಿತವಾಗಿದ್ದು, ಚೆನ್ನೈ ಸೆಂಟ್ರಲ್‌ನಲ್ಲಿ ತುರ್ತು ಸೇವಾ ಕೇಂದ್ರವನ್ನೂ ಸ್ಥಾಪಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande