ಮುಂಬಯಿ, 30 ಜೂನ್ (ಹಿ.ಸ.) :
ಆ್ಯಂಕರ್ : ‘ಕಾಂತ ಲಗಾ’ ಹಾಡಿನ ಮೂಲಕ ಖ್ಯಾತಿಗಳಿಸಿದ್ದ ಬಹು ಭಾಷಾ ನಟಿ ಶೆಫಾಲಿ ಜರಿವಾಲಾ (42) ಅವರ ಅಕಾಲಿಕ ಸಾವಿಗೆ ವಯಸ್ಸು ತಡೆಯುವ ಔಷಧಿಗಳು ಮತ್ತು ಇಂಜೆಕ್ಷನ್ಗಳ ಕಾರಣವಿರಬಹುದು ಎಂಬ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಜೂನ್ 27 ರಂದು ಮನೆಯಲ್ಲಿ ಧಾರ್ಮಿಕ ಪೂಜೆಯ ಹಿನ್ನೆಲೆಯಲ್ಲಿ ಉಪವಾಸದಲ್ಲಿದ್ದ ವೇಳೆ, ಅವರು ಅಂತಹ ಇಂಜೆಕ್ಷನ್ ತೆಗೆದುಕೊಂಡಿದ್ದು, ರಕ್ತದೊತ್ತಡ ಕುಸಿತದಿಂದ ಹೃದಯಾಘಾತ ಸಂಭವಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಶೆಫಾಲಿ ಕಳೆದ 8 ವರ್ಷಗಳಿಂದ ಈ ಔಷಧಿಗಳನ್ನು ಬಳಸುತ್ತಿದ್ದರೆಂದು ವರದಿಯಾಗಿದೆ. ಘಟನೆ ಸಂಬಂಧಪಟ್ಟಂತೆ ಪತಿ ಪರಾಗ್ ತ್ಯಾಗಿ ಸೇರಿ 10 ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa