ಹೊಸಪೇಟೆ, 03 ಜೂನ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಜೂನ್.02 ರಿಂದ ಜೂನ್.08 ರವರೆಗೆ ಸಮೀಕ್ಷೆ ಬ್ಲಾಕ್ ವ್ಯಾಪ್ತಿಯಲ್ಲಿ ವಿಸ್ತರಿಸಿದೆ ಹಾಗೂ ಆನ್ ಲೈನ್ ಮೂಲಕ ಜೂನ್.08 ರವರೆಗೆ ಸ್ವಯಂ ಘೋಷಣೆ ನೋಂದಾಯಿಸಲು ಅವಕಾಶ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ ಜಿಲ್ಲಾಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರ ಕಚೇರಿ ವಿಜಯನಗರ ಹಾಗೂ ವಿಧಾನಸಭಾ ಕ್ಷೇತ್ರವಾರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಂಟ್ರೋಲ್ ರೂಂ ಗಳನ್ನು ಸ್ಥಾಪಿಸಲಾಗಿದೆ. ವಿಜಯನಗರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಅಧಿಕಾರಿಗಳು ಕೆ.ಬಿ.ರಾಮಚಂದ್ರಪ್ಪ ಮೊ.9141827465, ವಿಜಯನಗರ ರಮೇಶ್ ಮೊ.80950 02829, ಹೊಸಪೇಟೆ ನಜೀಮಾ ಭಾನು ಮೊ. 9108777499, ಹಗರಿಬೊಮ್ಮನಹಳ್ಳಿ ಆನಂದ.ವೈ.ಡೊಳ್ಳಿನ ಮೊ.9901980762, ಕೂಡ್ಲಿಗಿ ಶಾಹೇಖಾ ಅಹ್ಮದಿ ಮೊ.8105909630, ಹಡಗಲಿ ಜ್ಯೋತಿ ಮೊ.9482608061, ಹರಪನಹಳ್ಳಿ ಎಸ್, ಆರ್,ಗಂಗಪ್ಪ ಮೊ.9739094433
ಸಮೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ಕಂಟ್ರೋಲ್ ರೂಂ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್