ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅಂತಿಮ ಪಟ್ಟಿ ಪ್ರಕಟ
ಹೊಸಪೇಟೆ, 03 ಜೂನ್ (ಹಿ.ಸ.) : ಆ್ಯಂಕರ್ : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಐದು ತಾಲೂಕುಗಳ ಶಿಶುಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಒಟ್ಟು 58 ಅಂಗನವಾಡಿ ಕಾರ್ಯಕರ್ತೆ 239 ಅಂಗನವಾಡಿ ಸಹಾಯಕಿಯರ ಅರ್ಜಿಗಳಲ್ಲಿ ಇದೀಗ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅಂತಿಮ ಪಟ್ಟಿ ಪ್ರಕಟ


ಹೊಸಪೇಟೆ, 03 ಜೂನ್ (ಹಿ.ಸ.) :

ಆ್ಯಂಕರ್ : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಐದು ತಾಲೂಕುಗಳ ಶಿಶುಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಒಟ್ಟು 58 ಅಂಗನವಾಡಿ ಕಾರ್ಯಕರ್ತೆ 239 ಅಂಗನವಾಡಿ ಸಹಾಯಕಿಯರ ಅರ್ಜಿಗಳಲ್ಲಿ ಇದೀಗ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾರವರು ತಿಳಿಸಿದ್ದಾರೆ.

ನೇಮಕಾತಿ ಆಯ್ಕೆ ಪ್ರಕ್ರಿಯೆಯನ್ನು ಮೆರಿಟ್ ಆಧಾರದ ಮೇಲೆ ಮಾಡಿರುವದರಿಂದ ಯಾವುದೇ ಹಣಕಾಸಿನ ವ್ಯವಹಾರ ಮಾಡದೇ ಹಾಗೂ ಮಧ್ಯವರ್ತಿಗಳ ಅಮಿಷಕ್ಕೆ ಒಳಗಾಗಬಾರದು. ಮತ್ತು ಅಂತಿಮವಾಗಿ ಆಯ್ಕೆಯಾಗಿರುವವರ ನೇಮಕಾತಿ ಆದೇಶವನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಅವರ ನೊಂದಾಯಿತ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಾಗ್ಯಲಕ್ಷ್ಮೀ ಬಾಂಡ್ ಹಣ ಜಮೆ : 2006-07ನೇ ಸಾಲಿನ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ಪಡೆದ ಫಲಾನುಭವಿನಗಳಿಗೆ ಅರ್ಹ ಹೊಂದಿರುವಂತೆ ಪರಿಪಕ್ವ ಮೊತ್ತಕ್ಕೆ ಮಂಜೂರಾತಿ ಮಾಡಲಾಗಿದ್ದು. ಮೊತ್ತವನ್ನು ಪಡೆಯಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅಗತ್ಯ ದಾಖಲೆಗಳಾದ ಪ್ರಸ್ತುತ ಚಾಲ್ತಿಯಲ್ಲಿರುವ ತಾಯಿ ಮಗುವಿನ ಜಂಟಿ ಖಾತೆಯನ್ನು ನೀಡುವುದು. ನಂತರ ಮೊತ್ತವನ್ನು ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಕಚೇರಿಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತದೆ. ಆದ್ದರಿಂದ ಯಾವುದೇ ಮಧ್ಯವರ್ತಿಗಳಾಗಲಿ ಇದಕ್ಕೆ ಸಂಬಂಧಿಸಿದಂತೆ ಯಾರೊಂದಿಗೂ ಹಣಕಾಸಿನ ವ್ಯವಹಾರ ಮಾಡಬಾರದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande