ಮೈಸೂರಿನಲ್ಲಿ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರಿಕರಣ
ಮೈಸೂರು, 23 ಜೂನ್ (ಹಿ.ಸ.) : ಆ್ಯಂಕರ್ : ಸೂಪರ್‌ಸ್ಟಾರ್ ರಜನಿಕಾಂತ್ ಮೈಸೂರಿನ ಬಿಳಿಕೆರೆ ಬಳಿ ನಡೆಯುತ್ತಿರುವ ‘ಜೈಲರ್ 2’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹಿಂದಿನ ‘ಜೈಲರ್’ ಸಿನಿಮಾ ಭರ್ಜರಿ ಯಶಸ್ಸು ಪಡೆದ ಹಿನ್ನೆಲೆ, ಇದರ ಸೀಕ್ವೆಲ್‌ಗಾಗಿ ಭಾರಿ ನಿರೀಕ್ಷೆಯಿದೆ. ಇತ್ತೀಚೆಗೆ ಶೂಟಿಂಗ್
ಮೈಸೂರಿನಲ್ಲಿ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರಿಕರಣ


ಮೈಸೂರು, 23 ಜೂನ್ (ಹಿ.ಸ.) :

ಆ್ಯಂಕರ್ : ಸೂಪರ್‌ಸ್ಟಾರ್ ರಜನಿಕಾಂತ್ ಮೈಸೂರಿನ ಬಿಳಿಕೆರೆ ಬಳಿ ನಡೆಯುತ್ತಿರುವ ‘ಜೈಲರ್ 2’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹಿಂದಿನ ‘ಜೈಲರ್’ ಸಿನಿಮಾ ಭರ್ಜರಿ ಯಶಸ್ಸು ಪಡೆದ ಹಿನ್ನೆಲೆ, ಇದರ ಸೀಕ್ವೆಲ್‌ಗಾಗಿ ಭಾರಿ ನಿರೀಕ್ಷೆಯಿದೆ.

ಇತ್ತೀಚೆಗೆ ಶೂಟಿಂಗ್ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ರಜನಿಕಾಂತ್ ನಿರಂತರವಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಸ್ಥಳಕ್ಕೆ ಬರುವಾಗ ಹಾಗೂ ಹೊರಡುವಾಗ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ನೆರೆದು, ತಲೈವಾ.. ತಲೈವಾ.. ಎಂದು ಘೋಷಣೆ ಹಾಕಿದರು. ರಜನಿಕಾಂತ್ ಸಹ ತಮ್ಮ ಅಭಿಮಾನಿಗಳಿಗೆ ಕೈಮುಗಿದು ನಮನ ಸಲ್ಲಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande