ಪೂರ್ವ ಚಂಪಾರಣ್, 22 ಜೂನ್ (ಹಿ.ಸ.) :
ಆ್ಯಂಕರ್ : ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸೌಲ್‌ನ ಭಾರತ-ನೇಪಾಳ ಗಡಿಭಾಗದ ಸ್ನೇಹ ಸೇತುವೆ ಬಳಿ, ಇರಾಕಿನ ಬಾಗ್ದಾದ್‌ನ ನಿವಾಸಿ ಬಾರಾ ಫೌಜಿ ಹಮೀದ್ ಅಲ್ ಬಯಾಟಿ ಎಂಬಾತನು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಂಧನಕ್ಕೊಳಗಾಗಿದ್ದಾನೆ.
ಎಸ್‌ಎಸ್‌ಬಿ ಜವಾನರು ಹಾಗೂ ಹರಿಯಾ ಪೊಲೀಸ್ ಠಾಣೆಯ ಸಿಬ್ಬಂದಿ ಗಡಿಯಲ್ಲಿ ತಪಾಸಣೆ ವೇಳೆ ಈ ಕ್ರಮ ಕೈಗೊಂಡಿದ್ದು, ಆರೋಪಿಯ ಭಾರತೀಯ ವೀಸಾ ಅವಧಿ ಮುಗಿದಿರುವುದಾಗಿ ಪತ್ತೆಯಾಗಿದೆ. ತಪಾಸಣೆಯ ವೇಳೆ ಆತನ ಬಳಿ ಯಾವುದೇ ದಾಖಲೆಗಳು ಇಲ್ಲದಿರುವುದು ದೃಢಪಟ್ಟಿದೆ.
ಈ ಕುರಿತು ಹರಿಯಾ ಎಸ್‌ಎಚ್‌ಒ ಕಿಶನ್ ಕುಮಾರ್ ಪಾಸ್ವಾನ್ ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳು ತನಿಖೆ ಮುಂದುವರೆಸುತ್ತಿವೆ. ಪ್ರಾಥಮಿಕ ವಿಚಾರಣೆ ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa