ಗದಗ, 02 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್.ಬಿ. ಸಂಕದ ಮಾರ್ಗದರ್ಶನದಲ್ಲಿ, ಗದಗ ಉಪವಿಭಾಗದ ಡಿಎಸ್ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚರಿಸುವ ಆಟೋ,ಟಂಟಂ ರಿಕ್ಷಾಗಳ ಮೇಲೆ ವಿಶೇಷ ಕಾರ್ಯಾಚರಣೆ ಕೈಗೊಂಡು ಅವಳಿ ನಗರದಲ್ಲಿ ಭಾರತೀಯ ಮೋಟಾರು ವಾಹನ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿದರು.
ತಪಾಸಣೆ ಸಂದರ್ಭದಲ್ಲಿ ನೋಂದಣಿ ಮಾಡಿಸದ, ವಾಹನ ಚಾಲನೆ, ಸರಿಯಾದ ದಾಖಲಾತಿಗಳಿಲ್ಲದೆ ವಾಹನ ಚಾಲನೆ ಮಾಡಿದ, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸಿದ ಒಟ್ಟು 141 ಆಟೋ/ಟಂಟಂ ರಿಕ್ಷಾಗಳನ್ನು ತಡೆ ಹಿಡಿದಿದ್ದು, ಅದರಲ್ಲಿ 36 ಆಟೋ/ಟಂಟಂ ರಿಕ್ಷಾಗಳಿಗೆ ಒಟ್ಟು 15100 ರೂಪಾಯಿಗಳ ಸ್ಥಳದಂಡ ಹಾಕಿ, ತಿಳವಳಿಕೆ ಹೇಳಿದರು.
ನೋಂದಣಿ ಮಾಡಿಸದೆ ದಾಖಲಾತಿಗಳಿಲ್ಲದ ವಾಹನ ಚಾಲನೆ ಮಾಡಿದ ಒಟ್ಟು 34 ಆಟೋಗಳು, ಹಾಗೂ ಗದಗ ಸಂಚಾರ ಪೊಲೀಸ್ ಠಾಣೆಯಿಂದ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡಿದ ಒಟ್ಟು 19 ಆಟೋಗಳು ಹಾಗೂ ಶಹರ ಠಾಣೆರವರು ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡಿದ ಒಟ್ಟು 40 ಆಟೋ, ಟಂಟಂ ರಿಕ್ಷಾ, ಬೆಟಗೇರಿ ಠಾಣೆಯಿಂದ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡಿದ ಒಟ್ಟು 28 ಆಟೋಗಳು, ಬೆಟಗೇರಿ ಬಡಾವಣೆ ಠಾಣೆಯಿಂದ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡಿದ ಒಟ್ಟು 17 ಆಟೋಗಳು, ಗ್ರಾಮೀಣ ಠಾಣೆಯಿಂದ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡಿದ ಒಟ್ಟು 3 ಆಟೋಗಳು ಸೇರಿ, ಒಟ್ಟೂ 141 ಆಟೋ, ಟಂಟಂ ರಿಕ್ಷಾಗಳನ್ನು ಅಧಿಕಾರಿಗಳು ತಡೆಹಿಡಿದು, ಅವರಿಗೆ ಸಭೆ ಕೈಗೊಂಡು ಸಂಚಾರ ನಿಯಮಗಳ ಪಾಲನೆ ಮತ್ತು ಸರಿಯಾದ ವಾಹನದ ದಾಖಲಾತಿ ಇಟ್ಟುಕೊಳ್ಳಲು ಸೂಕ್ತ ತಿಳುವಳಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Lalita MP