ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಜೂ.06 ರಂದು ಆಯ್ಕೆ ಪ್ರಕ್ರಿಯೆ
ಕೊಪ್ಪಳ, 02 ಜೂನ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೊಪ್ಪಳ ಜಿಲ್ಲಾ ಕ್ರೀಡಾ ಹಾಸ್ಟೆಲ್‍ಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಂಬಂಧ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 06 ರಂದು ವಿಶೇಷವಾದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ
ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಜೂ.06 ರಂದು ಆಯ್ಕೆ ಪ್ರಕ್ರಿಯೆ


ಕೊಪ್ಪಳ, 02 ಜೂನ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೊಪ್ಪಳ ಜಿಲ್ಲಾ ಕ್ರೀಡಾ ಹಾಸ್ಟೆಲ್‍ಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಂಬಂಧ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 06 ರಂದು ವಿಶೇಷವಾದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು, ಪಾಲಕರು/ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಪ್ರಸಕ್ತ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರು ಅಂದು ಬೆಳಿಗ್ಗೆ 10.30 ಗಂಟೆಯಿಂದ ವಿಶೇಷ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಲು ಬಾಲಕ/ಬಾಲಕಿಯರು ಕನಿಷ್ಟ 140 ಸೆಂ.ಮೀ ಎತ್ತರ, ವಾಲಿಬಾಲ್ ವಿಭಾಗದಲ್ಲಿ ಭಾಗವಹಿಸಲು ಬಾಲಕ/ಬಾಲಕಿಯರು 145 ಸೆಂ.ಮೀ ಎತ್ತರವಿರಬೇಕು.

ಮೇಲಿನ ದಿನಾಂಕದಂದು ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣ ಕೊಪ್ಪಳದಲ್ಲಿ ಹಾಜರಿರಬೇಕು. ಆಯ್ಕೆ ಪ್ರಕ್ರಿಯೆ ಒಂದೇ ದಿನ ಜರುಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರಸಕ್ತ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ಶಾಲಾ ದೃಢೀಕರಣ ಪತ್ರ ತರುವುದು ಕಡ್ಡಾಯವಾಗಿರುತ್ತದೆ ಅಥವಾ ಆಧಾರ್ ಕಾರ್ಡ್‍ನಲ್ಲಿ ಜನ್ಮ ದಿನಾಂಕ ನಮೂದಿಸಿದ್ದರೂ ಅರ್ಹತೆ ನೀಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ ನೀಡಲಾಗುವುದಿಲ್ಲ. ಕೊಪ್ಪಳ ಜಿಲ್ಲಾ ಕ್ರೀಡಾ ಹಾಸ್ಟೆಲ್‍ಗೆ ಕೊಪ್ಪಳ ಜಿಲ್ಲೆಯವರಿಗೆ ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ಕ್ರೀಡಾ ವಸತಿ ನಿಲಯದಲ್ಲಿ ನುರಿತ ತರಬೇತುದಾರರಿಂದ ದೈನಂದಿನ ಕ್ರೀಡಾ ತರಬೇತಿ ನೀಡಲಾಗುವುದು. ಕ್ರೀಡಾಪಟುಗಳು ತಂಗಲು ಸುಸಜ್ಜಿತ ಕೊಠಡಿಗಳ ವ್ಯವಸ್ಥೆಯಿದ್ದು, ದಿನನಿತ್ಯ ಉತ್ತಮ ಪೌಷ್ಠ್ಠಿಕಾಂಶಯುಕ್ತ ಊಟೋಪಹಾರ ನೀಡಲಾಗುತ್ತದೆ. ಉತ್ತಮ ಕ್ರೀಡಾ ಅಂಕಣಗಳ ಹಾಗೂ ಕ್ರೀಡಾ ಉಪಕರಣಗಳ ಸೌಲಭ್ಯ ಹೊಂದಿದೆ. ಕ್ರೀಡಾಪಟುಗಳಿಗೆ ವಾರದ ಒಂದು ದಿನ ಈಜು ತರಬೇತಿ, ಒಳಾಂಗಣ ಕ್ರೀಡಾಂಗಣ ಚಟುವಟಿಕೆಗಳು, ಜಿಮ್ ತರಬೇತಿ ನೀಡಲಾಗುವುದು. ಕ್ರೀಡಾಪಟುಗಳು ರಾಜ್ಯ/ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ ಇಲಾಖೆಯಿಂದ ಹಣಕಾಸಿನ ನೆರವು ನೀಡಲಾಗುವುದು. ರಾಜ್ಯ/ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾದಲ್ಲಿ ಮುಂದಿನ ಉನ್ನತ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಎ.ಎನ್ ಯತಿರಾಜು, ಖೋಖೋ ತರಬೇತುದಾರರು ಮೊ.ಸಂ: 9448633146, ರೋಹಿಣಿ ಪರ್ವತೀಕರ, ಮೊ.ನಂ: 8217324522, ಕಮಲ್ ಸಿಂಗ್, ಬಿಸ್ಟ್ ವಾಲಿಬಾಲ್ ತರಬೇತಿದಾರರು ಮೊ.ಸಂ:6360146300, ಸುರೇಶ, ವಾಲಿಬಾಲ್ ತರಬೇತುದಾರರು ಮೊ.ಸಂ.9901527333, ವಿಶ್ವನಾಥ ಕರ್ಲಿ, ಅಥ್ಲೆಟಿಕ್ಸ್ ತರಬೇತುದಾರರು ಮೋ: 8660455969, ದೀಪಾ, ವಾಲಿಬಾಲ್ ತರಬೇತುದಾರರು, ಸಣ್ಣ ವಾಲಿಬಾಲ್ ತರಬೇತಿ ಕೇಂದ್ರ ಕೊಪ್ಪಳ ಮೊ.ಸಂ.8088143003 ಇವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande