ಸಂಡೂರು, 2 ಜೂನ್ (ಹಿ.ಸ.) :
ಆ್ಯಂಕರ್ : 33/11 ಕೆ.ವಿ ವಿಠಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿದ ಜೂನ್ 3 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಸಂಡೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿಠಲಾಪುರ, ಅಂತಾಪುರ, ಮೆಟ್ರಿಕಿ, ರಾಜಪುರ, ಸುಲ್ತಾನ್‌ಪುರ್ ಗ್ರಾಮಗಳ ಎನ್.ಜೆ.ವೈ ಮತ್ತು ಐಪಿಸೆಟ್ ಗ್ರಾಹಕರು ಮತ್ತು 33/11 ಕೆ.ವಿ ವಿಠಲಾಪುರ ಮಾರ್ಗಕ್ಕೆ ಬರುವ ಎಲ್ಲಾ ಎಚ್‌ಟಿ ಮತ್ತು ಇಎಚ್‌ಟಿ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜೂನ್ 4 ಚೋರನೂರು ವಿದ್ಯುತ್ ವ್ಯತ್ಯಯ: 66/11 ಕೆ.ವಿ ಚೋರನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಜೂ.4 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಯಶವಂತನಗರ, ನಿಡುಗುರ್ತಿ, ಬಂಡ್ರಿ, ಹೆಚ್.ಕೆ ಹಳ್ಳಿ, ಸೋವೆನಹಳ್ಳಿ, ಅಗ್ರಹಾರ, ಕಾಳಿಂಗೇರಿ, ಚೋರನೂರು, ಬೊಮ್ಮಗಟ್ಟ, ಯರ್ರೆಯ್ಯನಹಳ್ಳಿ ಮತ್ತು ಗೊಲ್ಲಲಿಂಗಮನಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಪೂರೈಕೆ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್