ಟೆಹ್ರಾನ್, 18 ಜೂನ್ (ಹಿ.ಸ.) :
ಆ್ಯಂಕರ್ : ಇಸ್ರೇಲ್ ತನ್ನ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಬೃಹತ್ ಸೈಬರ್ ದಾಳಿಗಳನ್ನು ನಡೆಸಿದೆ ಎಂದು ಇರಾನ್ ಆರೋಪಿಸಿದೆ.
ಈ ದಾಳಿಗಳು ಸಾರ್ವಜನಿಕ ಸೇವೆಗಳನ್ನು ಅಡ್ಡಿಪಡಿಸುವ ಉದ್ದೇಶ ಹೊಂದಿದ್ದವೆಯೆಂದು ಇರಾನ್‌ನ ಸೈಬರ್ ಸೆಕ್ಯುರಿಟಿ ಕಮಾಂಡ್ ತಿಳಿಸಿದೆ.
ಇರಾನ್‌ನ ಬ್ಯಾಂಕ್ ಸೆಪಾ ಮೇಲೆ ನಡೆದ ದಾಳಿಯಿಂದ ಅನೇಕ ಬ್ಯಾಂಕಿಂಗ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಇಸ್ರೇಲ್ ಮೂಲದ ಹ್ಯಾಕರ್‌ಗಳು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ. ಅವರು ಬ್ಯಾಂಕ್‌ನ ಎಲ್ಲಾ ಡೇಟಾವನ್ನು ನಾಶಪಡಿಸಿದ್ದೇವೆ ಎಂದು ಘೋಷಿಸಿದ್ದಾರೆ.
ಈ ಸೈಬರ್ ದಾಳಿ, ಇತ್ತೀಚಿನ ಐದು ದಿನಗಳ ಇಸ್ರೇಲ್-ಇರಾನ್ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಅಸ್ಥಿರವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa