ನವದೆಹಲಿ, 17 ಜೂನ್ (ಹಿ.ಸ.) :
ಆ್ಯಂಕರ್ : ಭಾರತ ಇ-ಮೊಬಿಲಿಟಿ ಕ್ರಾಂತಿಯಲ್ಲಿ ಅಗಾಧ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈ ರೂಪಾಂತರ ಸಾಧ್ಯವಾಗಿದೆ,” ಎಂದು ತಿಳಿಸಿದ್ದಾರೆ.
2014-15ರಲ್ಲಿ ಕೇವಲ 2,343 ಎಲೆಕ್ಟ್ರಿಕ್ ವಾಹನಗಳು ಇದ್ದರೆ, 2024-25ಕ್ಕೆ ಇದು 2 ಕೋಟಿಗೆ ಏರಿಕೆಯಾಗಿದೆ. ಈ ಕ್ರಾಂತಿ ನಿವ್ವಳ ಶೂನ್ಯ ಉತ್ಸರ್ಜನೆ, ಆತ್ಮನಿರ್ಭರ ಭಾರತ, ಮತ್ತು ಹಸಿರು ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa