ಮರಾಠ ಅಭಿವೃದ್ಧಿ ನಿಗಮದಿಂದ ನಾನಾ ಯೋಜನೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ, 15 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು 2025–26 ನೇ ಸಾಲಿನ ಶಹಾಜೀರಾಜೇ ಸಮೃದ್ಧಿ, ಜೀಜಾವು ಜಲಭಾಗ್ಯ, ಅರಿವು ಶೈಕ್ಷಣಿಕ ಸಾಲ, ಶಾಹುಮಹಾರಾಜ ವಿದೇಶಿ ವ್ಯಾಸಂಗ, ಮಿಲ್ಟರಿ ಹೋಟೆಲ್, ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಸೇರಿದಂತೆ ನಾನಾ ಯೋಜನೆಗಳಿಗೆ
ಮರಾಠ ಅಭಿವೃದ್ಧಿ ನಿಗಮದಿಂದ ನಾನಾ ಯೋಜನೆಗಳಿಗೆ ಅರ್ಜಿ ಆಹ್ವಾನ


ಶಿವಮೊಗ್ಗ, 15 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು 2025–26 ನೇ ಸಾಲಿನ ಶಹಾಜೀರಾಜೇ ಸಮೃದ್ಧಿ, ಜೀಜಾವು ಜಲಭಾಗ್ಯ, ಅರಿವು ಶೈಕ್ಷಣಿಕ ಸಾಲ, ಶಾಹುಮಹಾರಾಜ ವಿದೇಶಿ ವ್ಯಾಸಂಗ, ಮಿಲ್ಟರಿ ಹೋಟೆಲ್, ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಸೇರಿದಂತೆ ನಾನಾ ಯೋಜನೆಗಳಿಗೆ ಮರಾಠ ಸಮುದಾಯದ ಅರ್ಹ ಅಭ್ಯರ್ಥಿಗಳಿಂದ ಜುಲೈ 4 ರೊಳಗಾಗಿ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಕಳೆದ ಎರಡು ಸಾಲುಗಳಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ https://kmcdc.karnataka.gov.in ಅಥವಾ ಮೊಬೈಲ್: 8867537799, ದೂರವಾಣಿ: 080-29903994 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕ ಡಾ. ಪ್ರಕಾಶ್ ಆರ್. ಪಾಗೋಜಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande