ಸಮಗ್ರ ಶಿಕ್ಷಣ ಅಭಿಯಾನ : ಅರ್ಜಿ ಆಹ್ವಾನ
ಬಳ್ಳಾರಿ, 13 ಜೂನ್ (ಹಿ.ಸ.) : ಆ್ಯಂಕರ್ : ಸಮಗ್ರ ಶಿಕ್ಷಣ – ಕರ್ನಾಟಕ ಬಳ್ಳಾರಿ ಸಮನ್ವಯ ಶಿಕ್ಷಣ ವಿಭಾಗದಡಿ 2025-26ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಬಿಐಇಆರ್‍ಟಿ ಪ್ರಾಥಮಿಕ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಉಪನಿರ್ದೇಶಕರು
ಸಮಗ್ರ ಶಿಕ್ಷಣ ಅಭಿಯಾನ :  ಅರ್ಜಿ ಆಹ್ವಾನ


ಬಳ್ಳಾರಿ, 13 ಜೂನ್ (ಹಿ.ಸ.) :

ಆ್ಯಂಕರ್ : ಸಮಗ್ರ ಶಿಕ್ಷಣ – ಕರ್ನಾಟಕ ಬಳ್ಳಾರಿ ಸಮನ್ವಯ ಶಿಕ್ಷಣ ವಿಭಾಗದಡಿ 2025-26ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಬಿಐಇಆರ್‍ಟಿ ಪ್ರಾಥಮಿಕ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಉಪನಿರ್ದೇಶಕರು ತಿಳಿಸಿದ್ದಾರೆ.

ಪ್ರಾಥಮಿಕ (1 ರಿಂದ 5) ಡಿ.ಇಡಿ ವಿಶೇಷ ಶಿಕ್ಷಣ(ಆರ್‍ಸಿಐ ಸಿಆರ್‍ಆರ್ ಸಂಖ್ಯೆಯೊಂದಿಗೆ), ಪ್ರೌಢ (6 ರಿಂದ 8) ಬಿ.ಇಡಿ ವಿಶೇಷ ಶಿಕ್ಷಣ(ಆರ್‍ಸಿಐ ಸಿಆರ್‍ಆರ್ ಸಂಖ್ಯೆಯೊಂದಿಗೆ) ಮತ್ತು ಪ್ರೌಢ (9 ರಿಂದ 12) ಬಿ.ಇಡಿ ವಿಶೇಷ ಶಿಕ್ಷಣ(ಆರ್‍ಸಿಐ ಸಿಆರ್‍ಆರ್ ಸಂಖ್ಯೆಯೊಂದಿಗೆ) ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿ ಅರ್ಜಿ ಆಹ್ವಾನಿಸಲಾಗಿದೆ.

ಈ ಹಿಂದೆ ಈ ಇಲಾಖೆಯಲ್ಲಿ ಬಿಐಇಆರ್‍ಟಿಯಾಗಿ ಕಾರ್ಯನಿರ್ವಹಿಸಿರುವÀ ಅಭ್ಯರ್ಥಿಗಳಿಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು.

ಅರ್ಜಿಗಳನ್ನು ಜೂ.17 ರೊಳಗಾಗಿ ಉಪನಿರ್ದೇಶಕರು ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ – ಕರ್ನಾಟಕ, ಕೋಟೆ, ಬಳ್ಳಾರಿ ಇವರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande