ಅಹಮದಾಬಾದ್‌ ಬೋಯಿಂಗ್ ಅಪಘಾತ : ನೂರಕ್ಕೂ ಅಧಿಕ ಸಾವು
ಅಹಮದಾಬಾದ್, 12 ಜೂನ್ (ಹಿ.ಸ.) : ಆ್ಯಂಕರ್ : ಗುಜರಾತಿನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಕಂಪನಿಗೆ ಸೇರಿದ ಬೋಯಿಂಗ್ 787 ವಿಮಾನ ಟೇಕ್ ಆಫ್ ಆದ ತಕ್ಷಣವೇ ಅಪಘಾತಕ್ಕೀಡಾಗಿದೆ. AI-171 ಸಂಖ್ಯೆಯ ಈ ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 10 ಕ್ಯಾಬಿನ್ ಸಿಬ್ಬ
Plane crash


ಅಹಮದಾಬಾದ್, 12 ಜೂನ್ (ಹಿ.ಸ.) :

ಆ್ಯಂಕರ್ : ಗುಜರಾತಿನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಕಂಪನಿಗೆ ಸೇರಿದ ಬೋಯಿಂಗ್ 787 ವಿಮಾನ ಟೇಕ್ ಆಫ್ ಆದ ತಕ್ಷಣವೇ ಅಪಘಾತಕ್ಕೀಡಾಗಿದೆ. AI-171 ಸಂಖ್ಯೆಯ ಈ ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರಿದ್ದರು. ನೂರಕ್ಕೂ ಅಧಿಕ ಸಾವು ಸಂಭವಿಸಿದೆ

ವಿಮಾನವು ಮಧ್ಯಾಹ್ನ 1:39ಕ್ಕೆ ರನ್‌ವೇ 23ರಿಂದ ಹೊರಟಿತು. ವಿಮಾನವು ಟೇಕ್ ಆಫ್ ಆಗಿರುವ ಕುರಿತು ಕರೆ ನೀಡಿದ ಕೆಲವೇ ಕ್ಷಣಗಳಲ್ಲಿ ATC ಜೊತೆ ಸಂಪರ್ಕ ಕಡಿದುಹೋಗಿದ್ದು. ನಂತರ, ವಿಮಾನ ನಿಲ್ದಾಣದ ಸಮೀಪವೇ ನೆಲಕ್ಕೆ ಬಿದ್ದು ಭಾರಿ ಕಪ್ಪು ಹೊಗೆ ಕಾಣಿಸಿಕೊಂಡಿದೆ.

ಅಪಘಾತದ ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಅಪಘಾತದ ಬಗ್ಗೆ ತನಿಖೆ ಆರಂಭವಾಗಿದೆ. ಮೃತರು ಅಥವಾ ಗಾಯಾಳುಗಳ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷೆಯಲ್ಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande