ಬಳ್ಳಾರಿ : ಜೂ.13 ರಂದು ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ, 11 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆವಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ಥಿ ಕಾರ್ಯ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜೂ.13 ರಂದು ಬೆಳಿಗ್ಗೆ 08 ರಿಂದ ಸಂಜೆ 06 ಗಂಟೆಯವರೆಗೆ ನ
ಬಳ್ಳಾರಿ : ಜೂ.13 ರಂದು ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ಬಳ್ಳಾರಿ, 11 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆವಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ಥಿ ಕಾರ್ಯ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜೂ.13 ರಂದು ಬೆಳಿಗ್ಗೆ 08 ರಿಂದ ಸಂಜೆ 06 ಗಂಟೆಯವರೆಗೆ ನಾನಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು :

ಎಫ್-43 ಸಿದ್ಧಾಪುರ ರಸ್ತೆ ಕೈಗಾರಿಕಾ ಮಾರ್ಗದ ಟಪಾಲ್ ಸ್ಟೀಲ್, ಸಿದ್ಧಾಪುರ ಕೈಗಾರಿಕಾ ಪ್ರದೇಶ. ಎಫ್-30 ಗುಗರಹಟ್ಟಿ ನಗರ ಮಾರ್ಗದ ಗುಗ್ಗರಹಟ್ಟಿ ಗ್ರಾಮ, ಮುಂಡರಗಿ ಬೈಪಾಸ್ ರಸ್ತೆ.

ಎಫ್-27 ಆಂಧ್ರಾಳ್ ನಗರ ಮಾರ್ಗದ ಆಂಧ್ರಾಳ್, ಪಾತ್ರಬೂದಿಹಾಳ್, ಮಂಗಮ್ಮ ಕ್ಯಾಂಪ್ ಗ್ರಾಮಗಳು. ಎಫ್-29 ಮಿಂಚೇರಿ ಎನ್‍ಜೆವೈ ಮಾರ್ಗದ ಮಿಂಚೇರಿ ಗ್ರಾಮ, ಸಂಜೀವರಾಯನ ಕೋಟೆ ಗ್ರಾಮ, ಮುಂಡರಗಿ ಗ್ರಾಮ, ಚರಕುಂಟೆ ಗ್ರಾಮ ಮತ್ತು ಎಫ್-26 ಚರಕುಂಟೆ ಐಪಿ ಫೀಡರ್ ಮಾರ್ಗದ ಮುಂಡರಗಿ, ಚರಕುಂಟೆ, ವೈ.ಬೂದಿಹಾಳ್ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande