ಬಳ್ಳಾರಿ – ಚಿಕ್ಕಜಾಜೂರು ರೈಲ್ವೆ ಡಬ್ಲಿಂಗ್‌ ಕಾರ್ಯಕ್ಕೆ ಅನುಮೋದನೆ
ನವದೆಹಲಿ, 11 ಜೂನ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಬಳ್ಳಾರಿ - ಚಿಕ್ಕಜಾಜೂರು ಮಾರ್ಗದ ಡಬ್ಲಿಂಗ್‌ ಕಾರ್ಯಕ್ಕೆ ಅನುಮೋದನೆ ನೀಡಿದೆ. 185 ಕಿ.ಮೀ ಉದ್ದದ ಈ ರೈಲ್ವೆ ಡಬ್ಲಿಂಗ್ ಯೋಜನೆಯು ₹ 3,342 ಕೋಟಿ ವೆಚ್ಚದಲ್ಲಿ ನಿರ್ಮಾ
ಬಳ್ಳಾರಿ – ಚಿಕ್ಕಜಾಜೂರು ರೈಲ್ವೆ ಡಬ್ಲಿಂಗ್‌ ಕಾರ್ಯಕ್ಕೆ ಅನುಮೋದನೆ


ನವದೆಹಲಿ, 11 ಜೂನ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಬಳ್ಳಾರಿ - ಚಿಕ್ಕಜಾಜೂರು ಮಾರ್ಗದ ಡಬ್ಲಿಂಗ್‌ ಕಾರ್ಯಕ್ಕೆ ಅನುಮೋದನೆ ನೀಡಿದೆ. 185 ಕಿ.ಮೀ ಉದ್ದದ ಈ ರೈಲ್ವೆ ಡಬ್ಲಿಂಗ್ ಯೋಜನೆಯು ₹ 3,342 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.

ಈ ಮಾರ್ಗದಲ್ಲಿ 19 ನಿಲ್ದಾಣಗಳು, 29 ಪ್ರಮುಖ ಸೇತುವೆಗಳು, 230 ಸಣ್ಣ ಸೇತುವೆಗಳು, 21 ಮೇಲ್ಸೇತುವೆಗಳು ಮತ್ತು 85 ಕೆಳಸೇತುವೆಗಳು ನಿರ್ಮಾಣಗೊಳ್ಳಲಿವೆ. ಇದರಿಂದ ರಾಜ್ಯದಲ್ಲಿನ ಸಂಪರ್ಕ, ಸರಕು ಸಾಗಣೆಗಳಿಗೆ ಹೆಚ್ಚಿನ ಬಲ ದೊರೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande