ಧಾರವಾಡ, 1 ಜೂನ್ (ಹಿ.ಸ.):
ಆ್ಯಂಕರ್:ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ನೇ ತರಗತಿ ಪ್ರವೇಶಕ್ಕಾಗಿ ಇಲಾಖಾ ವೆಬ್ಸೈಟ್ನಲ್ಲಿ ಅರ್ಹರಾದ 1:1 ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ಪಟ್ಟಿ ಅನುಸಾರ ಮೂಲ ಕೌನ್ಸೆಲಿಂಗ್ ನಿಗದಿಪಡಿಸಲಾಗಿದೆ.
ವಿದ್ಯಾರ್ಥಿಗಳು 5 ನೇ ತರಗತಿ ಮಾಕ್ರ್ಸಕಾರ್ಡ, ಬೊನೋಫೈಡ್ ಪ್ರಮಾಣ ಪತ್ರ. ಅರ್ಜಿ ಸಲ್ಲಿಸಿದ ಪ್ರವೇಶ ಪತ್ರ (ಹಾಲ್ಟಿಕೇಟ್). ವಿದ್ಯಾರ್ಥಿಯ ಹಾಗೂ ಪಾಲಕರ ಆಧಾರ ಕಾರ್ಡ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ವಿಶೇಷ ವರ್ಗದಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ದಾಖಲಾತಿ. ರೇಷನ್ ಕಾರ್ಡ. ಬ್ಯಾಂಕ್ ಪಾಸ್ ಪುಕ್. 4 ಪಾಸ್ಪೋರ್ಟ ಸೈಜ್ ಪೋಟೊಗಳೊಂದಿಗೆ ಕೌನ್ಸಲಿಂಗ್ಗೆ ಹಾಜರಾಗಬೇಕು.
ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ಖ್, ಪಾರ್ಸಿ ವಿದ್ಯಾರ್ಥಿಗಳು ಜೂನ್ 3, 2025 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆವರೆಗೆ ಹಾಗೂ ಎಸ್ಸ್.ಸಿ, ಎಸ್.ಟಿ, ಓ.ಬಿ.ಸಿ ಮತ್ತು ಜೈನ್ ವಿದ್ಯಾರ್ಥಿಗಳಿಗೆ ಜೂನ್ 4, 2025 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆವರೆಗೆ ಧಾರವಾಡ ಮಾಳಮಡ್ಡಿ ಶಿವಪೂರಿ ಕಾಲೋನಿಯ ಸನ್ಮತಿ ಮಾರ್ಗದಲ್ಲಿರುವ ಅಂಬೇಡ್ಕರ ಭವನದಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0836-2971590 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa