ವಸತಿ ಶಾಲೆಗಳ ಪ್ರವೇಶಾತಿಗೆ ಕೌನ್ಸಲಿಂಗ್ ಆರಂಭ
ಹೊಸಪೇಟೆ , 1 ಜೂನ್ (ಹಿ.ಸ.) ಆ್ಯಂಕರ್: 2025-26 ನೇ ಸಾಲಿನ ಅಲ್ಪಸಂಖ್ಯಾತರ ಡಾ.ಎಪಿಜೆ.ಅಬ್ದುಲ್ ಕಲಾಂ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿದ್ದು, ಫಲಿತಾಂಶಗಳನ್ನು ಈಗಾಗಲೇ ಇಲಾಖೆ ಜಾಲಾತಾಣ ಮತ್ತು ವಸತಿ ಶಾಲೆಗಳಲ್ಲಿ ಪ್ರಕಟಿಸ
ವಸತಿ ಶಾಲೆಗಳ ಪ್ರವೇಶಾತಿಗೆ ಕೌನ್ಸಲಿಂಗ್ ಆರಂಭ


ಹೊಸಪೇಟೆ , 1 ಜೂನ್ (ಹಿ.ಸ.)

ಆ್ಯಂಕರ್: 2025-26 ನೇ ಸಾಲಿನ ಅಲ್ಪಸಂಖ್ಯಾತರ ಡಾ.ಎಪಿಜೆ.ಅಬ್ದುಲ್ ಕಲಾಂ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿದ್ದು, ಫಲಿತಾಂಶಗಳನ್ನು ಈಗಾಗಲೇ ಇಲಾಖೆ ಜಾಲಾತಾಣ ಮತ್ತು ವಸತಿ ಶಾಲೆಗಳಲ್ಲಿ ಪ್ರಕಟಿಸಲಾಗಿದೆ. ಜೂ.4 ಮತ್ತು ಜೂ.5 ರಂದು ಬೆಳಿಗ್ಗೆ 10 ಗಂಟೆಗೆ ಅಲ್ಪಸಂಖ್ಯಾತರ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ, ಜಂಬುನಾಥ ಹಳ್ಳಿ, ಹೊಸಪೇಟೆ ಈ ವಸತಿ ಶಾಲೆಯಲ್ಲಿ ಕೌನ್ಸಲಿಂಗ್ ನಿಗದಿಯಾಗಿದ್ದು, 1:1 ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಕೌನ್ಸಲಿಂಗ್‌ನಲ್ಲಿ ಭಾಗವಹಿಸಿ ಪ್ರವೇಶದ ಸೀಟನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಲಾಗಿದೆ. ಒಂದು ವೇಳೆ ಕೌನ್ಸಲಿಂಗ್ ಭಾಗವಹಿಸದೇ ಇದ್ದಲ್ಲಿ ಪ್ರವೇಶದ ಸೀಟ್ ರದ್ದಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರರು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ(ಸಿಬಿಎಸ್‌ಇ) ಜಂಬುನಾಥಹಳ್ಳಿ ಹೊಸಪೇಟೆ. ಮೊ.9901302904, ಪಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಾಯಕನಹಳ್ಳಿ, ಕೂಡ್ಲಿಗಿ ಮೊ.9964915789, ಪಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹರಪನಹಳ್ಳಿ ಮೊ.9886512605, ಪಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮರಿಯಮ್ಮನಹಳ್ಳಿ ಮೊ.9964732718 ಸಂಪರ್ಕಿಸಲು ತಿಳಿಸಿದ್ದಾರೆ.

ವಿಶೇಷ ಸೂಚನೆ : ಕೌನ್ಸಲಿಂಗ್‌ಗೆ ಹಾಜರಾಗುವ ವಿದ್ಯಾರ್ಥಿಗಳು ತಪ್ಪದೇ ದಾಖಲೆಗಳನ್ನು ತೆಗೆದುಕೊಂಡು ಬರಬೇಕು. 5 ಪೋಟೋ, ಪ್ರವೇಶ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ವಿಶೇಷ ಕೋಟಾದಲ್ಲಿ ಆಯ್ಕೆಯಾದ ಪ್ರಮಾಣ ಪತ್ರ, 5ನೇ ತರಗತಿ ಅಂಕಪಟ್ಟಿ, ಎಲ್ಲಾ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಜೆರಾಕ್ಸ್ ತರಬೇಕು ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande