ನಿರುದ್ಯೋಗಿ ಮಹಿಳೆಯರಿಗೆ ತರಬೇತಿಗಾಗಿ ಅರ್ಜಿ ಆಹ್ವಾನ
ಧಾರವಾಡ, 1 ಜೂನ್ (ಹಿ.ಸ.): ಆ್ಯಂಕರ್: 2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ಡೋಮೆಸ್ಟೀಕ್ ಡಾಟಾ ಎಂಟ್ರಿ ಆಪರೆಟರ್ ವಿಷಯದ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯನ್ನು ಧಾರವಾಡ ಅಭಿಯ
ನಿರುದ್ಯೋಗಿ ಮಹಿಳೆಯರಿಗೆ ತರಬೇತಿಗಾಗಿ ಅರ್ಜಿ ಆಹ್ವಾನ


ಧಾರವಾಡ, 1 ಜೂನ್ (ಹಿ.ಸ.):

ಆ್ಯಂಕರ್:

2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ಡೋಮೆಸ್ಟೀಕ್ ಡಾಟಾ ಎಂಟ್ರಿ ಆಪರೆಟರ್ ವಿಷಯದ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯನ್ನು ಧಾರವಾಡ ಅಭಿಯಾನ್ ಫೌಂಡೇಶನ್, ಸುವರ್ಣಾ ಕಂಪ್ಯೂಟರ್ ಎಜುಕೇಶನ್ ಸೆಂಟರ್, ಪ್ರೀಜಮ್ ಕಾಂಪ್ಯೂಟೇಟಿವ್ ಅಕಾಡೆಮಿ ಮತ್ತು ತಿಮ್ಮನ್ನಗೌಡರ್ ಎಜುಕೇಷನ್ ಅಕಾಡಮಿ ಸಂಸ್ಥೆಗಳಿಂದ ನೀಡಲಾಗುತ್ತಿದೆ.

ಆಸಕ್ತ 10 ನೇ ತರಗತಿ ವಿದ್ಯಾರ್ಹತೆ ಹೊಂದಿದ ಮಹಿಳೆಯರು ಆಧಾರ ಕಾರ್ಡ್, ಶಾಲೆಯ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತಿಚಿನ 6 ಭಾವಚಿತ್ರಗಳೊಂದಿಗೆ ಜೂನ್ 10, 2025 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಧಾರವಾಡ ಟಿಪ್ಪು ಸರ್ಕಲ್ ಹತ್ತಿರವಿರುವ ಅಭಿಯಾನ್ ಫೌಂಡೇಶನ್, ಧಾರವಾಡ ವಿದ್ಯಾಗಿರಿ ಜೆ.ಎಸ್.ಎಸ್. ಸಂಸ್ಥೆ ಎದುರಗಡೆ ಇರುವ ಸುವರ್ಣಾ ಕಂಪ್ಯೂಟರ್ ಎಜುಕೇಶನ್ ಸೆಂಟರ್, ಧಾರವಾಡ ಸಪ್ತಾಪೂರಭಾವಿ ಹತ್ತಿರ ಇರುವ ಪ್ರೀಜಮ್ ಕಾಂಪ್ಯೂಟೇಟಿವ್ ಅಕಾಡೆಮಿ ಮತ್ತು ತಿಮ್ಮನ್ನಗೌಡರ್ ಎಜುಕೇಷನ್ ಅಕಾಡಮಿ ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande