ಶನಿವಾರ, ಭಾನುವಾರ ಸಹ ಕಾರ್ಯನಿರ್ವಹಿಸಲಿರುವ ಉಪನೊಂದಣಿ ಕಚೇರಿಗಳು
ಕಲಬುರಗಿ, 30 ಮೇ (ಹಿ.ಸ.) : ಆ್ಯಂಕರ್ : ನೋಂದಣಿ ಮತ್ತ ಮುದ್ರಾಂಕ ಇಲಾಖೆಯ ಕಲಬುರಗಿ ಜಿಲ್ಲಾ ನೋಂದಣಿ ಕಛೇರಿಯ ಅಧೀನದಲ್ಲಿ ಬರುವ 7 ಉಪ ನೋಂದಣಿ ಕಛೇರಿಗಳು ಸರ್ಕಾರದ ಆದೇಶ ದಿ.20-05-2025ರಂತೆ ಸರದಿಯ ಆಧಾರದ ಮೇಲೆ ಜೂನ್ 1 ರಿಂದ ಡಿಸೆಂಬರ್ 28ರ ವರೆಗೆ ಬರುವ 2ನೇ ಶನಿವಾರ, 3ನೇ ಶನಿವಾರ ಹಾಗೂ ಭಾನುವಾರಗಳ
Sub-Registration Offices to remain open on Saturdays and Sundays


ಕಲಬುರಗಿ, 30 ಮೇ (ಹಿ.ಸ.) :

ಆ್ಯಂಕರ್ : ನೋಂದಣಿ ಮತ್ತ ಮುದ್ರಾಂಕ ಇಲಾಖೆಯ ಕಲಬುರಗಿ ಜಿಲ್ಲಾ ನೋಂದಣಿ ಕಛೇರಿಯ ಅಧೀನದಲ್ಲಿ ಬರುವ 7 ಉಪ ನೋಂದಣಿ ಕಛೇರಿಗಳು ಸರ್ಕಾರದ ಆದೇಶ ದಿ.20-05-2025ರಂತೆ ಸರದಿಯ ಆಧಾರದ ಮೇಲೆ ಜೂನ್ 1 ರಿಂದ ಡಿಸೆಂಬರ್ 28ರ ವರೆಗೆ ಬರುವ 2ನೇ ಶನಿವಾರ, 3ನೇ ಶನಿವಾರ ಹಾಗೂ ಭಾನುವಾರಗಳ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿಕೊಂಡಿದ್ದಾರೆ.

ಅದರಂತೆ ಕಲಬುರಗಿ ಉಪ ನೋಂದಣಿ ಕಚೇರಿಯು ಜೂನ್ 1, ಜುಲೈ 6, ಆಗಸ್ಟ್ 9, ಸೆಪ್ಟೆಂಬರ್ 13, ಅಕ್ಟೋಬರ್ 12, ನವೆಂಬರ್ 16, ಡಿಸೆಂಬರ್ 25 ರಂದು ಕಾರ್ಯನಿರ್ವಹಿಸಲಿದೆ. ಆಳಂದ ಉಪ ನೋಂದಣಿ ಕಚೇರಿಯು ಜೂನ್ 8, ಜುಲೈ 12, ಆಗಸ್ಟ್ 10, ಸೆಪ್ಟೆಂಬರ್ 14, ಅಕ್ಟೋಬರ್ 19, ನವೆಂಬರ್ 22, ಡಿಸೆಂಬರ್ 28 ರಂದು, ಜೇವರ್ಗಿ ಉಪ ನೋಂದಣಿ ಕಚೇರಿಯು ಜೂನ್ 14, ಜುಲೈ 13, ಆಗಸ್ಟ್ 17, ಸೆಪ್ಟೆಂಬರ್ 21, ಅಕ್ಟೋಬರ್ 25, ನವೆಂಬರ್ 23 ರಜಾ ದಿನದಂದು ಕಾರ್ಯನಿರ್ವಹಿಸಲಿದೆ.

ಅದೇ ರೀತಿ ಚಿತ್ತಾಪುರ ಉಪ ನೋಂದಣಿ ಕಚೇರಿಯು ಜೂನ್ 15, ಜುಲೈ 20, ಆಗಸ್ಟ್ 23, ಸೆಪ್ಟೆಂಬರ್ 27, ಅಕ್ಟೋಬರ್ 26, ಡಿಸೆಂಬರ್ 7 ರಂದು, ಅಫಜಲಪೂರ ಉಪ ನೋಂದಣಿ ಕಚೇರಿಯು ಜೂನ್ 22, ಜುಲೈ 26, ಆಗಸ್ಟ್ 24, ಸೆಪ್ಟೆಂಬರ್ 28, ನವೆಂಬರ್ 22, ಡಿಸೆಂಬರ್ 13 ರಜಾ ದಿನದಂದು ಕಾರ್ಯನಿರ್ವಹಿಸಲಿದೆ.

ಸೇಡಂ ಉಪ ನೋಂದಣಿ ಕಚೇರಿಯು ಜೂನ್ 28, ಜುಲೈ 27, ಆಗಸ್ಟ್ 31, ಅಕ್ಟೋಬರ್ 5, ನವೆಂಬರ್ 8, ಡಿಸೆಂಬರ್ 14 ರಂದು ಹಾಗೂ ಚಿಂಚೋಳಿ ಉಪ ನೋಂದಣಿ ಕಚೇರಿಯು ಜೂನ್ 29, ಆಗಸ್ಟ್ 8, ಸೆಪ್ಟೆಂಬರ್ 7, ಅಕ್ಟೋಬರ್ 11, ನವೆಂಬರ್ 9 ಮತ್ತು 21 ರಜಾ ದಿನದಂದು ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande