ರಾಯಚೂರು, 30 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಚೇರಿಯನ್ನು ಪ್ರತಿ ರವಿವಾರ, 2ನೇ ಶನಿವಾರ ಹಾಗೂ 4ನೇ ಶನಿವಾರ ರಜಾ ದಿನಗಳಂದು ಕಾರ್ಯನಿರ್ವಹಿಸುವಂತೆ ಮಾನ್ಯ ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಅಧಿಸೂಚನೆ ಹೊರಡಿಸಿ ಸೂಚನೆ ನೀಡಿರುತ್ತಾರೆ.
ಮತ್ತು ಈ ದಿನಗಳಂದು ಕಾರ್ಯನಿರ್ವಹಿಸಿದ ಉಪ ನೋಂದಣಿ ಕಚೇರಿಗೆ ಮಂಗಳವಾರದಂದು ರಜಾ ದಿನವೆಂದು ಘೋಷಿಸಿ ಆದೇಶಿಸಲಾಗಿದೆ.
ಈ ಆದೇಶದಂತೆ ರಾಯಚೂರ ಜಿಲ್ಲೆಯ ಆರು ಉಪ ನೋಂದಣಿ ಕಚೇರಿಗಳ ಪೈಕಿ ರಾಯಚೂರ ಉಪ ನೋಂದಣಿ ಕಚೇರಿಯು ಜೂನ್ 1 ರಂದು ಕಾರ್ಯನಿರ್ವಹಿಸುತ್ತದೆ. ಹಾಗೂ ಜಿಲ್ಲೆಯ ಇತರೆ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುವ ರಜಾ ದಿನಗಳ ದಿನಾಂಕವನ್ನು ಇಲಾಖೆಯ ಕಚೇರಿಯ ನೋಟಿಸ್ ಬೋರ್ಡನಲ್ಲಿ ಪ್ರಕಟಿಸಲಾಗಿರುತ್ತದೆ. ಈ ರಜಾ ದಿನಗಳಂದು ಜಿಲ್ಲೆಯ ಎಲ್ಲ ತಾಲೂಕುಗಳ ಉಪ ನೋಂದಣಿ ಕಚೇರಿ ವ್ಯಾಪ್ತಿಯ ಸ್ವತ್ತುಗಳ ನೋಂದಣಿಯನ್ನು ಸದರಿ ದಿನಾಂಕದಂದು ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿ ಮಾಡಲಾಗುವುದು. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳುವಂತೆ ರಾಯಚೂರ ಜಿಲ್ಲೆಯ ಮುದ್ರಾಂಕಗಳ ಉಪ ಆಯುಕ್ತರು ಹಾಗು ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್