ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ಉಪ ನೋಂದಣಿ ಕಚೇರಿಗಳ ವೇಳಾಪಟ್ಟಿ ಪ್ರಕಟ
ಕೊಪ್ಪಳ, 30 ಮೇ (ಹಿ.ಸ.) : ಆ್ಯಂಕರ್ : ಜಿಲ್ಲಾ ವ್ಯಾಪ್ತಿಯಲ್ಲಿನ ಉಪನೋಂದಣಿ ಕಚೇರಿಗಳು ಸರದಿ ಆಧಾರದಲ್ಲಿ ಜೂನ್‍ನಿಂದ ಡಿಸೆಂಬರ್‍ವರೆಗಿನ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರದ ರಜಾ ದಿನಗಳಂದು ಕಾರ್ಯನಿರ್ವಹಿಸುವ ಕುರಿತಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಗಂಗಾವತಿ ತಾಲ್ಲೂಕಿನ ಉಪ ನ
ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ಉಪ ನೋಂದಣಿ ಕಚೇರಿಗಳ ವೇಳಾಪಟ್ಟಿ ಪ್ರಕಟ


ಕೊಪ್ಪಳ, 30 ಮೇ (ಹಿ.ಸ.) :

ಆ್ಯಂಕರ್ : ಜಿಲ್ಲಾ ವ್ಯಾಪ್ತಿಯಲ್ಲಿನ ಉಪನೋಂದಣಿ ಕಚೇರಿಗಳು ಸರದಿ ಆಧಾರದಲ್ಲಿ ಜೂನ್‍ನಿಂದ ಡಿಸೆಂಬರ್‍ವರೆಗಿನ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರದ ರಜಾ ದಿನಗಳಂದು ಕಾರ್ಯನಿರ್ವಹಿಸುವ ಕುರಿತಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಗಂಗಾವತಿ ತಾಲ್ಲೂಕಿನ ಉಪ ನೋಂದಣಿ ಕಚೇರಿಯು ಜೂನ್ 01, ಜೂನ್ 28, ಜುಲೈ 20, ಆಗಸ್ಟ್ 10, ಸೆಪ್ಟೆಂಬರ್ 07, ಸೆಪ್ಟೆಂಬರ್ 28, ಅಕ್ಟೋಬರ್ 25, ನವೆಂಬರ್ 16 ಹಾಗೂ ಡಿಸೆಂಬರ್ 14 ರ ರಜಾ ದಿನಗಳಂದು ಕಾರ್ಯನಿರ್ವಹಿಸಲಿದೆ.

ಕಾರಟಗಿ ತಾಲ್ಲೂಕಿನ ಉಪ ನೋಂದಣಿ ಕಚೇರಿಯು ಜೂನ್ 08, ಜೂನ್ 29, ಜುಲೈ 26, ಆಗಸ್ಟ್ 17, ಸೆಪ್ಟೆಂಬರ್ 13, ಅಕ್ಟೋಬರ್ 05, ಅಕ್ಟೋಬರ್ 26, ನವೆಂಬರ್ 22 ಹಾಗೂ ಡಿಸೆಂಬರ್ 21 ರ ರಜಾ ದಿನಗಳಂದು ಕಾರ್ಯನಿರ್ವಹಿಸಲಿದೆ.

ಕುಷ್ಟಗಿ ತಾಲ್ಲೂಕಿನ ಉಪ ನೋಂದಣಿ ಕಚೇರಿಯು ಜೂನ್ 14, ಜುಲೈ 06, ಜುಲೈ 27, ಆಗಸ್ಟ್ 23, ಸೆಪ್ಟೆಂಬರ್ 14, ಅಕ್ಟೋಬರ್ 11, ನವೆಂಬರ್ 2, ನವೆಂಬರ್ 23 ಹಾಗೂ ಡಿಸೆಂಬರ್ 27 ರ ರಜಾ ದಿನಗಳಂದು ಕಾರ್ಯನಿರ್ವಹಿಸಲಿದೆ.

ಯಲಬುರ್ಗಾ ತಾಲ್ಲೂಕಿನ ಉಪ ನೋಂದಣಿ ಕಚೇರಿಯು ಜೂನ್ 15, ಜುಲೈ 12, ಆಗಸ್ಟ್ 03, ಆಗಸ್ಟ್ 24, ಸೆಪ್ಟೆಂಬರ್ 21, ಅಕ್ಟೋಬರ್ 12, ನವೆಂಬರ್ 08, ಡಿಸೆಂಬರ್ 07 ಹಾಗೂ ಡಿಸೆಂಬರ್ 28 ರ ರಜಾ ದಿನಗಳಂದು ಕಾರ್ಯನಿರ್ವಹಿಸಲಿದೆ.

ಕೊಪ್ಪಳ ತಾಲ್ಲೂಕಿನ ಉಪ ನೋಂದಣಿ ಕಚೇರಿಯು ಜೂನ್ 22, ಜುಲೈ 13, ಆಗಸ್ಟ್ 09, ಆಗಸ್ಟ್ 31, ಸೆಪ್ಟೆಂಬರ್ 27, ಅಕ್ಟೋಬರ್ 19, ನವೆಂಬರ್ 09 ಹಾಗೂ ಡಿಸೆಂಬರ್ 13 ರ ರಜಾ ದಿನಗಳಂದು ಕಾರ್ಯನಿರ್ವಹಿಸಲಿದೆ.

ರಜಾ ದಿನಗಳಂದು ಕಾರ್ಯನಿರ್ವಹಿಸುವ ಉಪ ನೋಂದಣಿ ಕಚೇರಿಗಳಿಗೆ ಸಂಬಂಧಿಸಿದ ತಾಲ್ಲೂಕಿನ ಸಾರ್ವಜನಿಕರು ಭೇಟಿ ನೀಡಬಹುದು ಎಂದು ಜಿಲ್ಲಾ ನೋಂದಣಾಧಿಕಾರಿಗಳಾದ ಸುಭಾಸ ಹೊಸಳ್ಳಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande