ಕಲಬುರಗಿ ಜಿಲ್ಲೆಗೆ ದೊರಕಿದೆ ಪ್ರಜಾಸೌಧಗಳ ಕೊಡುಗೆ
ಕಲಬುರಗಿ, 30 ಮೇ (ಹಿ.ಸ.) : ಆ್ಯಂಕರ್ : ಕಲಬುರಗಿ ಜಿಲ್ಲೆಯ ಕಾಳಗಿ, ಯಡ್ರಾಮಿ, ಕಮಲಾಪುರ, ಶಹಾಬಾದ ತಾಲೂಕು ಆಡಳಿತಗಳಿಗೆ ಸುಸಜ್ಜಿತ ಹಾಗೂ ಸುವ್ಯವಸ್ಥಿತವಾದ “ಪ್ರಜಾಸೌಧ“ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್
ಕಲಬುರ್ಗಿ ಜಿಲ್ಲೆಗೆ ದೊರಕಿದೆ ಪ್ರಜಾಸೌಧಗಳ ಕೊಡುಗೆ.


ಕಲಬುರಗಿ, 30 ಮೇ (ಹಿ.ಸ.) :

ಆ್ಯಂಕರ್ : ಕಲಬುರಗಿ ಜಿಲ್ಲೆಯ ಕಾಳಗಿ, ಯಡ್ರಾಮಿ, ಕಮಲಾಪುರ, ಶಹಾಬಾದ ತಾಲೂಕು ಆಡಳಿತಗಳಿಗೆ ಸುಸಜ್ಜಿತ ಹಾಗೂ ಸುವ್ಯವಸ್ಥಿತವಾದ “ಪ್ರಜಾಸೌಧ“ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳಾದ ಡಾ. ಫೌಜಿಯಾ ತರನ್ನುಮ್ ಅವರಿಗೆ ಹಸ್ತಾಂತರಿಸಿದರು.

ಕಲಬುರಗಿ ಜಿಲ್ಲೆಯ ತಾಲೂಕು ಆಡಳಿತಗಳ ಅನುಕೂಲಕ್ಕೆ ಮಹತ್ವದ ಪ್ರಜಾಸೌಧ ಕಟ್ಟಡಗಳನ್ನು ಒದಗಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಒಂದೇ ಸೂರಿನ ಅಡಿಯಲ್ಲಿ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವಂತಹ ಸುಸಜ್ಜಿತ ಕಟ್ಟಡಗಳು ದೊರಕಿದಾಗ ಜನತೆಗೆ ಹೆಚ್ಚು ಅನುಕೂಲವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande