ನನ್ನ ಮಗನನ್ನು ಹುಡುಕಿಕೋಡಿ : ಮಾಧ್ಯಮಗಳ ಮುಂದೆ ತಂದೆ ಅಳಲು
ಕಲಬುರಗಿ, 30 ಮೇ (ಹಿ.ಸ.) : ಆ್ಯಂಕರ್ : ನನ್ನ ಮಗನನ್ನು ಹುಡುಕಿಕೋಡಿ ಎಂದು ನೋದ ತಂದೆಯೊಬ್ಬ ಮಾಧ್ಯಮಗಳ ಮುಂದೆ ಅಳಲು ತೊಡೊಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಾಣೆಯಾದ ಯುವಕನ ತಂದೆ ಫೀನಿಕ್ಸ್ ಅವರು, ನನ್ನ ಮಗ 17ವರ್ಷದ ವಿನಾಯಕ ಕಾಣೆಯಾಗಿ ಒಂದು ವರ್ಷ
ನನ್ನ ಮಗನನ್ನು ಹುಡುಕಿಕೋಡಿ ಮಾಧ್ಯಮಗಳ ಮುಂದೆ ತಂದೆ ಅಳಲು


ಕಲಬುರಗಿ, 30 ಮೇ (ಹಿ.ಸ.) :

ಆ್ಯಂಕರ್ : ನನ್ನ ಮಗನನ್ನು ಹುಡುಕಿಕೋಡಿ ಎಂದು ನೋದ ತಂದೆಯೊಬ್ಬ ಮಾಧ್ಯಮಗಳ ಮುಂದೆ ಅಳಲು ತೊಡೊಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಾಣೆಯಾದ ಯುವಕನ ತಂದೆ ಫೀನಿಕ್ಸ್ ಅವರು, ನನ್ನ ಮಗ 17ವರ್ಷದ ವಿನಾಯಕ ಕಾಣೆಯಾಗಿ ಒಂದು ವರ್ಷ ಕಳೆದಿದೆ. ಈವರೆಗೆ ಆತನ ಗುರುತು ಪತ್ತೆಯಾಗಿಲ್ಲ. ಈ ಕುರಿತು ನಗರದ ಚೌಕ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರುಣ ಸಹ ಪೋಲಿಸರು ನನ್ನ ಮಗನನ್ನು ಹುಡುಕಿಕೋಡುತ್ತಿಲ್ಲ. ಬದಲಿಗೆ ಠಾಣೆಗೆ ಹೋದ್ರೆ ಪದೇ ಪದೇ ಯಾಕ್ ಬರ್ತಿಯಾ, ನಿನ್ನ ಮೇಲೆನೇ ಕೇಸ್ ಹಾಕ್ತವೆ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಇದೆ ವೇಳೆ ನನ್ನ ಮಗನನ್ನು ಹುಡುಕುವ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹಾಗೂ ಪೋಲಿಸ್ ಇಲಾಖೆಗೆ ಕಾಣೆಯಾದ ಯುವಕನ ತಂದೆ ಫೀನಿಕ್ಸ್ ಮನವಿ ಮಾಡಿದ್ದಾರೆ‌.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande