ಶೋಪಿಯಾನ್, 29 ಮೇ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಬಾಸ್ಕುಚನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಬಂಧಿಸಿವೆ.
ಇರ್ಫಾನ್ ಬಶೀರ್ ಮತ್ತು ಉಜೈರ್ ಸಲಾಂ ಎಂಬ ಇಬ್ಬರನ್ನು ಶರಣಾಗತಗೊಳಿಸಿ, ಅವರಿಂದ ಎರಡು ಎಕೆ-56 ರೈಫಲ್ಗಳು, ಗ್ರೆನೇಡ್ಗಳು, ಮ್ಯಾಗಜೀನ್ಗಳು, ಗುಂಡುಗಳು, ನಗದು, ಮೊಬೈಲ್, ಸ್ಮಾರ್ಟ್ವಾಚ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೇನೆಯ 44 ಆರ್ಆರ್, ಸಿಆರ್ಪಿಎಫ್ 178 ಬೆಟಾಲಿಯನ್ ಮತ್ತು ಎಸ್ಒಜಿ ಶೋಪಿಯಾನ್ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa