ಬೆಂಬಲ ಯೋಜನೆಯಡಿ ಸೂರ್ಯಕಾಂತಿ ಉತ್ಪನ್ನ ಖರೀದಿ ಆರಂಭ
ಹೊಸಪೇಟೆ, 29 ಮೇ (ಹಿ.ಸ.) : ಆ್ಯಂಕರ್ : 2024-25ನೇ ಸಾಲಿನ ಹಿಂಗಾರು ಹಂಗಾಮಿನ ಎಫ್‍ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ಕ್ವಿಂಟಲ್‍ಗೆ ರೂ.7280 ರಂತೆ ರೈತರಿಂದ ಉತ್ಪನ್ನ ಖರೀದಿಗಾಗಿ ಮೊತ್ತವನ್ನು ನಿಗಧಿಪಡಿಸಲಾಗಿದೆ ಎಂದು ಜಿಲ್ಲಾ
ಬೆಂಬಲ ಯೋಜನೆಯಡಿ ಸೂರ್ಯಕಾಂತಿ ಉತ್ಪನ್ನ ಖರೀದಿ ಆರಂಭ


ಹೊಸಪೇಟೆ, 29 ಮೇ (ಹಿ.ಸ.) :

ಆ್ಯಂಕರ್ : 2024-25ನೇ ಸಾಲಿನ ಹಿಂಗಾರು ಹಂಗಾಮಿನ ಎಫ್‍ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ಕ್ವಿಂಟಲ್‍ಗೆ ರೂ.7280 ರಂತೆ ರೈತರಿಂದ ಉತ್ಪನ್ನ ಖರೀದಿಗಾಗಿ ಮೊತ್ತವನ್ನು ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಟಗಿ, ನಂದಿಬೇವೂರು, ಹುರುಳಿಹಾಳು, ಉಪನಾಯಕನಹಳ್ಳಿ ಮತ್ತು ಕೋಗಳಿ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ (ಕೆಓಎಫ್) ಅಡಿಯಲ್ಲಿ ಓಜಿಸಿಎಸ್ ಖರೀದಿ ಏಜೆನ್ಸಿ ಕೇಂದ್ರಗಳಿದ್ದು, ರೈತರು ತಾವು ಬೆಳೆದ ಸೂರ್ಯಕಾಂತಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಮೇ.16 ರಿಂದ 90 ದಿನಗಳವರೆಗೆ ಉತ್ಪನ್ನ ಖರೀದಿಸಲಾಗುವುದು.

ಸೂರ್ಯಕಾಂತಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು ಮೇ.16 ರಿಂದ 80 ದಿನಗಳೊಳಗೆ ನೋಂದಣಿ ಮಾಡಿಸಿ ಹಾಗೂ ನೋಂದಣಿ ಚೀಟಿಯನ್ನು ಪಡೆಯಬೇಕು. ರೈತರು ಮಧ್ಯವರ್ತಿಗಳ ಮೊರೆ ಹೋಗದೆ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande