ಮುಲ್ಲಾನಪುರ್, 29 ಮೇ (ಹಿ.ಸ.) :
ಆ್ಯಂಕರ್ : ಐಪಿಎಲ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಮುಖಾಮುಖಿಯಾಗಲಿವೆ. ಎರಡು ತಂಡಗಳೂ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶದ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.
ಅಂಕಪಟ್ಟಿ ಸ್ಥಿತಿ:
ಆರ್ ಸಿಬಿ ಹಾಗೂ ಪಂಜಾಬ್ ಎರಡೂ ತಂಡಗಳು 14ರಲ್ಲಿ 9 ಪಂದ್ಯಗಳಲ್ಲಿ ಜಯಗಳಿಸಿದ್ದು, ತಲಾ 19 ಅಂಕಗಳಿವೆ. ಪಂಜಾಬ್ ತಂಡ ರನ್ ರೇಟ್ನ ಮೇರೆಗೆ ಅಗ್ರಸ್ಥಾನದಲ್ಲಿದ್ದು,ಆರ್ ಸಿಬಿ ಎರಡನೇ ಸ್ಥಾನದಲ್ಲಿದೆ.
ಐಪಿಎಲ್ನಲ್ಲಿ ಈವರೆಗೆ ಎರಡು ತಂಡಗಳು 35 ಬಾರಿ ಮುಖಾಮುಖಿಯಾಗಿದ್ದು, ಪಂಜಾಬ್ 18 ಬಾರಿ ಜಯಗಳಿಸಿ ಅಲ್ಪ ಮುನ್ನಡೆಯಲ್ಲಿದೆ. ಆರ್ ಸಿಬಿ17 ಗೆಲುವು ಸಾಧಿಸಿದೆ.
ಇಂದಿನ ಪಂದ್ಯದಲ್ಲಿ ಆರ್ಸಿಬಿಯಿಂದ ಲಿಯಾಂಡರ್ ಲಿವಿಂಗ್ಸ್ಟೋನ್ ತಂಡದಿಂದ ಕೈಬಿಡಲಾಗಿದ್ದು, ಟಿಮ್ ಡೇವಿಡ್ ಅವರನ್ನು ಸೇರಿಸಲಾಗುತ್ತಿದೆ.
ಎರಡೂ ತಂಡಗಳು ಸಮಬಲ ಹೊಂದಿದ್ದು, ಇಂದು ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa