ಇಂಫಾಲ್, 28 ಮೇ (ಹಿ.ಸ.) :
ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಖೊಂಗ್ಹಂಪತ್ ಮಂತ್ರಿ ಲೈಕೈಯಲ್ಲಿ ಪಿಡಬ್ಲ್ಯೂಜಿ ಸಂಘಟನೆಯ ಮೋಹಮ್ಮದ್ ಅಯೂಬ್ ಖಾನ್ (28) ಬಂಧಿತನಾಗಿದ್ದರೆ, ತೌಬಲ್ ಜಿಲ್ಲೆಯಲ್ಲಿರುವ ಲೈರೋಂಗ್ಥೆಲಾಲ್ ಪಿತ್ರಾದಲ್ಲಿ ಪ್ರೀಪಾಕ್ ಸಂಘಟನೆಯ ಶಮ್ಜೆತ್ಸಬಾಮ್ ಇಬೊಮ್ಚಾ ಮೈತೆ (30) ಹಾಗೂ ಲಮ್ಜಿಂಗ್ಬಾ ವಹೆಂಗ್ಬಾಮ್ (23) ಬಂಧಿತರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್‌ಎಲ್‌ಆರ್, ಐಎನ್‌ಎಸ್‌ಎಎಸ್, M-16 ರೈಫಲ್‌ಗಳು, ಗ್ರೆನೇಡ್‌ಗಳು, ಹಲವಾರು ಐಇಡಿಗಳು, ಗುಂಡುಗಳು ಹಾಗೂ 30 ಮೀಟರ್ ಕಾರ್ಡ್‌ಟೆಕ್ಸ್ ಸ್ಫೋಟಕ ಬಳ್ಳಿಯು ವಶಪಡಿಸಿಕೊಳ್ಳಲಾಗಿದೆ.
ಉಗ್ರ ಚಟುವಟಿಕೆಗಳ ಹೆಚ್ಚಳದ ಹಿನ್ನೆಲೆ, ಮಣಿಪುರದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa