ಬೆಳಗಾವಿ, 28 ಮೇ (ಹಿ.ಸ.):
ಆ್ಯಂಕರ್:ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಣೆ, ಮಾರಾಟ ಮತ್ತು ಬೆಳೆಸುತ್ತಿದ್ದ ಪ್ರಕರಣಗಳಲ್ಲಿ ವಿವಿಧ ಠಾಣೆಗಳ ಮೂಲಕ ವಶಪಡಿಸಿಕೊಳ್ಳಲಾದ ಒಟ್ಟು 40 ಕಿಲೋಗ್ರಾಂ ಮಾದಕ ವಸ್ತುಗಳನ್ನು ಇಂದು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಸಮಿತಿ ನಿಯಮಾನುಸಾರವಾಗಿ ನಿಷ್ಕ್ರಿಯಗೊಳಿಸಿದೆ.
ಈ ಕಾರ್ಯಾಚರಣೆಯನ್ನು ಸಂಬಂಧಿತ ನ್ಯಾಯಾಂಗ ಮತ್ತು ಆರೋಗ್ಯ ಇಲಾಖೆಗಳ ಮಾರ್ಗಸೂಚಿಗಳಂತೆ ಹಮ್ಮಿಕೊಳ್ಳಲಾಗಿದ್ದು, ಮಾದಕ ದ್ರವ್ಯಗಳ ನಿಯಂತ್ರಣ ಮತ್ತು ಅಪರಾಧ ನಿಯಂತ್ರಣದಲ್ಲಿ ಹೆಜ್ಜೆಯಾಗಿದೆ ಎಂದು ಜಿಲ್ಲಾ ಪೋಲಿಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa