ಗಾಂಧಿನಗರ, 27 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಗಾಂಧಿನಗರದಲ್ಲಿ 2.5 ಕಿ.ಮೀ ಉದ್ದದ ಭವ್ಯ ರೋಡ್ ಶೋ ನಡೆಸಿದರು.
ಪತ್ರಾಗಾರ ಕಚೇರಿಯಿಂದ ಮಹಾತ್ಮ ಮಂದಿರದವರೆಗೆ ನಡೆದ ರೋಡ ಶೋನಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಉಪಸ್ಥಿತರಿದ್ದರು.
ಈ ವೇಳೆ ಸಾವಿರಾರು ಮಂದಿ ತ್ರಿವರ್ಣ ಧ್ವಜ ಹಿಡಿದು 'ಮೋದಿ ಮೋದಿ' ಘೋಷಣೆ ಹಾಕಿದರು.
ಸಿಂಧೂರ ಬಣ್ಣದ ಸೀರೆ ತೊಟ್ಟ ಮಹಿಳೆಯರು ದೇಶಭಕ್ತಿ ಘೋಷಣೆಗಳಿಂದ ಶೋಗೆ ಮೆರುಗು ನೀಡಿದರು. ಜನಪದ ನೃತ್ಯ, ದೇಶಭಕ್ತಿ ಗೀತೆಗಳೊಂದಿಗೆ ಗಾಂಧಿನಗರ ತ್ರಿವರ್ಣಮಯವಾಗಿ ಬಿಂಬಿತವಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa