ಗುಜರಾತ್ ಗೆ ಪ್ರಧಾನಿ ಮೋದಿ ಎರಡು ದಿನ ಪ್ರವಾಸ
ನವದೆಹಲಿ, 26 ಮೇ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಬೆಳಿಗ್ಗೆ ಅವರು ದಾಹೋದ್‌ನಲ್ಲಿ 9,000 HP ವಿದ್ಯುತ್ ಲೋಕೋಮೋಟಿವ್ ಉತ್ಪಾದನಾ ಘಟಕವನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ.
Pm


ನವದೆಹಲಿ, 26 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಬೆಳಿಗ್ಗೆ ಅವರು ದಾಹೋದ್‌ನಲ್ಲಿ 9,000 HP ವಿದ್ಯುತ್ ಲೋಕೋಮೋಟಿವ್ ಉತ್ಪಾದನಾ ಘಟಕವನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಈ ಘಟಕವು ದೇಶೀಯ ಹಾಗೂ ರಫ್ತು ಉದ್ದೇಶಕ್ಕಾಗಿ ಎಂಜಿನ್‌ಗಳನ್ನು ತಯಾರಿಸುತ್ತದೆ.

ದಾಹೋದ್‌ನಲ್ಲಿ ಪ್ರಧಾನಿಯವರು ಸುಮಾರು 24,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ. ವಂದೇ ಭಾರತ್ ರೈಲು, ವಿವಿಧ ಎಕ್ಸ್‌ಪ್ರೆಸ್ ರೈಲುಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ

ಸಂಜೆ, ಪ್ರಧಾನಿ ಮೋದಿ ಭುಜ್‌ನಲ್ಲಿ 53,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿದ್ಯುತ್, ರಸ್ತೆ, ಬಂದರು ಹಾಗೂ ಸೌರ ವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮೇ 27ರಂದು ಅವರು ಗಾಂಧಿನಗರದಲ್ಲಿ ‘ನಗರಾಭಿವೃದ್ಧಿ ವರ್ಷ 2025’ ಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ 22,000 ಪಿಎಂಎವಾಯ್ ವಸತಿ ಘಟಕಗಳ ಲೋಕಾರ್ಪಣೆ ಹಾಗೂ 3,300 ಕೋಟಿ ರೂ. ಅನುದಾನವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande