ವಡೋದರ, 26 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ‘ಆಪರೇಷನ್ ಸಿಂಧೂರ್’ ನಂತರ ಮೊದಲ ಬಾರಿಗೆ ಸೋಮವಾರ ತಮ್ಮ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಿದರು. ವಡೋದರಾ ವಿಮಾನ ನಿಲ್ದಾಣದಿಂದ ವಾಯುಪಡೆ ಗೇಟ್ ವರೆಗೆ ಸುಮಾರು ಒಂದು ಕಿಲೋಮೀಟರ್ ಉದ್ದದ ಭವ್ಯ ರೋಡ್ ಶೋ ನಡೆಯಿತು. ಈ ರೋಡ್ ಶೋಗೆ ‘ಸಿಂಧೂರ ಸಮ್ಮಾನ್ ಯಾತ್ರೆ’ ಎಂದು ಹೆಸರಿಸಲಾಗಿದೆ.
ಮೋದಿ ಅವರನ್ನು ಸ್ವಾಗತಿಸಲು ಅಪಾರ ಜನಸಮೂಹ ಜಮಾಯಿಸಿತ್ತು. ಮಹಿಳೆಯರು ಕೇಸರಿ ಸೀರೆ ಧರಿಸಿ ತ್ರಿವರ್ಣ ಧ್ವಜಗಳೊಂದಿಗೆ “ಭಾರತ್ ಮಾತಾ ಕೀ ಜೈ” ಘೋಷಣೆ ಕೂಗಿದರು. ಶಾಸ್ತ್ರೀಯ ನೃತ್ಯ, ಸಾಂಪ್ರದಾಯಿಕ ಉಡುಪು, ಸ್ಥಳೀಯ ಕಲಾಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa