ಕಾರಿಗೆ ಲಾರಿ ಡಿಕ್ಕಿ : ಕಾರಿನಲ್ಲಿದ್ದ ಗರ್ಭಿಣಿ ಸೇರಿ ಒಟ್ಟು 6 ಜನರ ಸಾವು
ಸಂಡೂರು, 26 ಮೇ (ಹಿ.ಸ.) : ಆ್ಯಂಕರ್ : ಕಬ್ಬಿಣದ ಅದಿರು ಸಾಗಿಸುವ ಟಿಪ್ಪರ್ ಲಾರಿಯು ಜೈಸಿಂಗ್‍ಪುರದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಗರ್ಭಿಣಿ ಸೇರಿ ಒಟ್ಟು 6 ಜನ ಮೃತಪಟ್ಟಿದ್ದಾರೆ. ಮೃತರು ಎಲ್ಲರೂ ಸಂಡೂರು ಪಟ್ಟಣದ ಲಕ್ಷ್ಮೀಪುರ ಗ್ರಾಮ
ಕಾರಿಗೆ ಲಾರಿ ಡಿಕ್ಕಿ : ಕಾರಿನಲ್ಲಿದ್ದ ಗರ್ಭಿಣಿ ಸೇರಿ ಒಟ್ಟು 6 ಜನರ ಸಾವು


ಸಂಡೂರು, 26 ಮೇ (ಹಿ.ಸ.) :

ಆ್ಯಂಕರ್ : ಕಬ್ಬಿಣದ ಅದಿರು ಸಾಗಿಸುವ ಟಿಪ್ಪರ್ ಲಾರಿಯು ಜೈಸಿಂಗ್‍ಪುರದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಗರ್ಭಿಣಿ ಸೇರಿ ಒಟ್ಟು 6 ಜನ ಮೃತಪಟ್ಟಿದ್ದಾರೆ. ಮೃತರು ಎಲ್ಲರೂ ಸಂಡೂರು ಪಟ್ಟಣದ ಲಕ್ಷ್ಮೀಪುರ ಗ್ರಾಮದವರು.

ಮೃತರು ನಂದೀಶ್ (28), ನಂದೀಶ್ ಅವರ ಪತ್ನಿ ಗರ್ಭಿಣಿ ಜಯಲಕ್ಷ್ಮಿ (25), ನಂದೀಶ್ ಅವರ ಸಹೋದರಿ ಆಶಾ (32), ಆಶಾ ಅವರ ಮಗ ಸಾಯಿ ಸಾತ್ವಿಕ್ (5), ಮಗಳು ಬಿಂದುಶ್ರೀ (9 ತಿಂಗಳು) ಮೃತಪಟ್ಟಿದ್ದಾರೆ.

ಮೃತ ಆಶಾ ಅವರ ಮತ್ತೊಬ್ಬ ಮಗಳು ಮಹಾಲಕ್ಷ್ಮಿ (3) ಅವರು ತೀವ್ರವಾಗಿ ಗಾಯಗೊಂಡು ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande