ಬೆಂಗಳೂರು, 26 ಮೇ (ಹಿ.ಸ.) :
ಆ್ಯಂಕರ್ : 40% ಸರ್ಕಾರ ಎಂಬ ಹಸಿ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈಗ ಜವಾಬ್ದಾರಿಯುತ ಪ್ರತಿ ಪಕ್ಷವಾಗಿ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳ ಬಗ್ಗೆ ದನಿ ಎತ್ತುತ್ತಿರುವ ಬಿಜೆಪಿ ಪಕ್ಷದ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಪ್ರತಿ ಪಕ್ಷಗಳ ದನಿ ಅಡಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು,
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗೊಡ್ಡು ಬೆದರಿಕೆಗಳಿಗೆ, ನಟ್ಟು-ಬೋಲ್ಟು ಟೈಟು ಮಾಡುವ ಧಮ್ಕಿಗಳಿಗೆ ನಾವು ಜಗ್ಗುವುದು ಇಲ್ಲ, ಬಗ್ಗುವುದೂ ಇಲ್ಲ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವೈಫಲ್ಯ, ಎಡವಟ್ಟುಗಳನ್ನು ಜನರಿಗೆ ತಲುಪಿಸುವ ನಮ್ಮ ಸಾಂವಿಧಾನಿಕ ದತ್ತ ಕರ್ತವ್ಯ ಎಗ್ಗಿಲ್ಲದೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa